ಮಳವಳ್ಳಿ ಪಟ್ಟಣದ ತಾಲೂಕು ಕಚೇರಿ ಮುಂದೆ ಬಲಗೈ ಸಮುದಾಯಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು. ಸುರೇಶ್, ಪೂರಿಗಾಲಿ ಜಯರಾಜು, ಬೆಳಕವಾಡಿ ಕಾಂತರಾಜು, ಕಲ್ಕುಣಿ ನಂಜುಂಡಸ್ವಾಮಿ, ಸಿದ್ದರಾಮು, ಚಂದ್ರಹಾಸ್, ನಾಗರಾಜು, ಮಹದೇವಸ್ವಾಮಿ, ಕೆಂಪರಾಜು, ಜಯಚಂದ್ರ, ವೃಷಭೇಂದ್ರ, ಸಿದ್ದರಾಜು ಇತರರಿದ್ದರು.  
ಮಂಡ್ಯ

ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ

ರವಿಕುಮಾರ್ ಪಿ. ಕೆ
ಮಳವಳ್ಳಿ: ಬಲಗೈ ಸಮುದಾಯಕ್ಕೆ ಒಳ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಹಾಗೂ ನ್ಯಾಯಮೂರ್ತಿ ನಾಗಮೋಹನದಾಸ್ ಸಿದ್ಧಪಡಿಸಿರುವ ಸಮೀಕ್ಷೆ ವರದಿ ಅವೈಜ್ಞಾನಿಕತೆಯಿಂದ ಕೂಡಿದೆ ಎಂದು ಆರೋಪಿಸಿ ಬಲಗೈ ಸಮುದಾಯಗಳ ಒಕ್ಕೂಟದ ಸದಸ್ಯರು ಪಟ್ಟಣದಲ್ಲಿ ಶುಕ್ರವಾರ ಬಹೃತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಯಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕೆಲಹೊತ್ತು ಅನಂತ್‌ರಾಂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ನಂತರ ತಾಲೂಕು ಕಚೇರಿಗೆ ತೆರಳಿ ಧರಣಿ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದ ಅಧ್ಯಕ್ಷ ಸುರೇಶ್ ಮಾತನಾಡಿ, ಜೇನುಗೂಡಿನಂತಿದ್ದ ಪರಿಶಿಷ್ಟ ಜಾತಿ ಸಮುದಾಯದವರನ್ನು ಒಳಮೀಸಲಾತಿ ಹೆಸರಿನಲ್ಲಿ ಕುತಂತ್ರ ರಾಜಕಾರಣಕ್ಕೆ ಬಲಿಕೊಡಲಾಗಿದೆ ಎಂದು ಕಿಡಿಕಾರಿದರು.
ಒಳ ಮೀಸಲಾತಿಯಡಿಯಲ್ಲಿ ಶೈಕ್ಷಣಿಕ ಮತ್ತು ಔದ್ಯೋಗಿಕ ವಿಚಾರದಲ್ಲಿ ವರ್ಗೀಕರಣ ಮಾಡಿ ನಾಗಮೋಹನದಾಸ್ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ವರದಿಗೆ ರಾಜ್ಯಪಾಲರು ಸಹಿ ಹಾಕಿರುವುದು ಸಮುದಾಯಕ್ಕೆ ಮಾಡಿದ ದ್ರೋಹ ಎಂದರು.
ಅವೈಜ್ಞಾನಿಕ ಒಳ ಮೀಸಲಾತಿ ವರದಿಯನ್ನು ತಿರಸ್ಕರಿಸಬೇಕು. ಜಾತಿ ಪ್ರಮಾಣ ಪತ್ರ ನೀಡುವಾಗ ಎಬಿಸಿ ವರ್ಗಿಕರಣವನ್ನು ಕೈಬಿಟ್ಟು ಹಳೆ ಪದ್ದತಿಯನ್ನು ಮುಂದುವರಿಸಬೇಕೆಂದು ಆಗ್ರಹಿಸಿದರು.
ನಿವೃತ್ತ ಉಪನ್ಯಾಸಕ ರಂಗಸ್ವಾಮಿ ಮಾತನಾಡಿ, ಸರ್ಕಾರದಲ್ಲಿ ಭರ್ತಿಯಾಗದೆ ಉಳಿದಿರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಭರ್ತಿ ಮಾಡಬೇಕು. ಪ್ರಸ್ತುತ ಆಯವ್ಯಯದಲ್ಲಿ ಮೀಸಲಿಟ್ಟಿರುವ ಎಸ್‌ಸಿ-ಎಸ್ಪಿ, ಟಿಎಸ್‌ಪಿ ಹಣವನ್ನು ಅನ್ಯ ಉದ್ದೇಶಗಳಿಗೆ ವರ್ಗಯಿಸದೆ ಪರಿಶಿಷ್ಟರ ಅಭಿವೃದ್ಧಿಗೆ ಬಳಕೆ ಮಾಡುವುದ ನಸೇರಿದಂತೆ ಹಲವು ಹಕ್ಕೊತ್ತಾಯಗಳನ್ನು ಜಾರಿಗೊಳಿಸಬೇ ಕೆಂದು ಶಿರಸ್ತೇದಾರ್ ಗುರುಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪೂರಿಗಾಲಿ ಜಯರಾಜು, ಬೆಳಕವಾಡಿ ಕಾಂತರಾಜು, ಕಲ್ಕುಣಿ ನಂಜುಂಡಸ್ವಾಮಿ, ಸಿದ್ದರಾಮು, ಚಂದ್ರಹಾಸ್, ನಾಗರಾಜು, ಮಹದೇವಸ್ವಾಮಿ, ಕೆಂಪರಾಜು, ಜಯಚಂದ್ರ, ವೃಷಭೇಂದ್ರ, ಸಿದ್ದರಾಜು, ನಾಗಸಿದ್ದಯ್ಯ, ಸ್ವಾಮಿ, ಗುರುಸ್ವಾಮಿ, ರಾಜೇಶ್, ಚಂದ್ರಪಶೇಖರ್, ಮಹದೇವಸ್ವಾಮಿ, ಚನ್ನಬಸವಯ್ಯ, ಡಾ. ವೆಂಕಟೇಶ್, ಕುಮಾರ್, ಮಧುಗಂಗಾಧರ್, ಮಲ್ಲು ಸೇರಿದಂತೆ ಇತರರು ಇದ್ದರು.