ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಜೆ.ಬಾಲಗಂಗಾಧರ್, ಹಿರೇಮರಳಿ ಶೀನಪ್ಪ, ವೀರಭದ್ರಸ್ವಾಮಿ, ಗಾಣದಹೊಸೂರು ಕೃಷ್ಣೇಗೌಡ, ಹಿರೇಮರಳಿ ಗ್ರಾ.ಪಂ.ಉಪಾಧ್ಯಕ್ಷ ಮನು, ಮಾಜಿ ಉಪಾಧ್ಯಕ್ಷ ಕೆ.ಸಿ.ಕುಮಾರಸ್ವಾಮಿ, ಸ್ಥಳೀಯ ಗ್ರಾಮಸ್ಥರಾದ ಕೆ.ಹೊಸೂರು ರಮೇಶ್, ಜಗಣ್ಣ, ಸ್ವಾಮಿಗೌಡ, ನಾಗೇಶ್, ಅಶೋಕ, ನವೀನ್, ಸುನೀಲ್, ಜ್ಞಾನೇಶ್, ಆಟೋ ಜಲೇಂದ್ರ ಇತರರು ಭಾಗವಹಿಸಿದ್ದರು.
ಪಾಂಡವಪುರ : ತಾಲೂಕಿನ ಬನಘಟ್ಟ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ಹೊಸ ಸೇತುವೆ ಲೋಕಾರ್ಪಣೆಗೆ ಆಗ್ರಹಿಸಿ ಬಿಜೆಪಿ ಮುಖಂಡ ಎಚ್.ಎನ್,ಮಂಜುನಾಥ್ ನೇತೃತ್ವದಲ್ಲಿ ಸ್ಥಳೀಯ ಗ್ರಾಮಗಳ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.
ಬನಘಟ್ಟ ಗೇಟ್ ನ ಹಳೆ ಸೇತುವೆ ಬಳಿ ರಸ್ತೆ ಕಿರಿದಾಗಿದ್ದರಿಂದ ಹೆದ್ದಾರಿ ಪ್ರಾಧಿಕಾರದಿಂದ ಹೊಸ ಸೇತುವೆ ನಿರ್ಮಾಣವಾಗಿ ಹಲವಾರು ವರ್ಷಗಳೇ ಕಳೆದಿದ್ದರೂ ಸೇತುವೆ ಉದ್ಫಾಟಿಸಿಲ್ಲ. ತಾಂತ್ರಿಕ ಸಮಸ್ಯೆ ಇದೆ ಎಂಬ ನೆಪವೊಡ್ಡಿ ಅಧಿಕಾರಿಗಳು ಸೇತುವೆ ಉದ್ಫಾಟನೆಗೆ ಕ್ರಮ ವಹಿಸುತ್ತಿಲ್ಲ. ಇದರಿಂದಾಗಿ ಈ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಬಹಳ ತೊಂದರೆ ಉಂಟಾಗಿದೆ. ಇಲ್ಲಿ ಹಲವಾರು ಅಪಘಾತಗಳು ಉಂಟಾಗಿ ಅಪಾರ ಸಾವು ನೋವು ಸಂಭವಿಸಿವೆ, ಸೇತುವೆ ಉದ್ಫಾಟನೆಯಾಗದ ಕಾರಣ, ರಸ್ತೆ ನಿರ್ಮಾಣ ಪೂರ್ಣಗೊಳ್ಳದೆ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆ ಕಿರಿದಾಗಿದ್ದು, ಉಬ್ಬು ತಗ್ಗುಗಳು ಹೆಚ್ಚಾಗಿರುವುದರಿಂದ ವಾಹನ ಸವಾರರು ನಿತ್ಯವೂ ಫಜೀತಿ ಪಡುವಂತಾಗಿದೆ, ಹೀಗಾಗಿ ಹೊಸ ಸೇತುವೆ ಉದ್ಫಾಟನೆಗೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವೇ ಸೇತುವೆ ಉದ್ಪಾಟನೆಯಾಗುವರೆಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಈ ಹಿಂದಿನಂತೆಯೇ ಯಥಾಸ್ಥಿತಿಯಲ್ಲಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸ್ಥಳಕ್ಕೆ ಬಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಉಜ್ಜನ್ ಕೊಪ್ಪ, ಎಇ ಚೇತನ್ ಅವರನ್ನು ಪ್ರತಿಭಟನಾಕಾರರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಸೇತುವೆಯ ತಾಂತ್ರಿಕ ಸಮಸ್ಯೆ ಬಗೆಹರಿಸಿ ಕೂಡಲೇ ಸೇತುವೆ ಉದ್ಫಾಟಿಸಬೇಕು. ಜತೆಗೆ ಪ್ರಾಧಿಕಾರದ ಮೇಲಾಧಿಕಾರಿಗಳನ್ನು ಸ್ಥಳಕ್ಕೆ ಆಹ್ವಾನಿಸಿ ತಕ್ಷಣವೇ ಸೇತುವೆ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಆಗ ಎಇಇ ಉಜ್ಜನ್ ಕೊಪ್ಪ ಮಾತನಾಡಿ, ಫೆ.12ರಂದು ಹೊಸ ಸೇತುವೆ ಸಮಸ್ಯೆ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಬಳಿಕ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರಾದರೂ ಪ್ರತಿಭಟನಕಾರರು ಇದಕ್ಕೆ ಒಪ್ಪದೆ ಪ್ರತಿಭಟನೆ ಮುಂದುವರಿಸಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಶರತ್ ಕುಮಾರ್, ಪ್ರತಿಭಟನಾಕಾರರ ಮನವೊಲಿಸಿ, ಹೆದ್ದಾರಿ ಪ್ರಾಧಿಕಾರದ ಮೇಲಾಧಿಕಾರಿಗಳೊಂದಿಗೆ ದೂರವಾಣಿಯ ಮೂಲಕ ಚರ್ಚಿಸಿ ಫೆ.18ರ ಒಳಗಾಗಿ ಸಮಸ್ಯೆ ಇತ್ಯರ್ಥಗೊಳಿಸಲಾಗುವುದು ಎಂದು ಭರವಸೆ ನೀಡಿದ ಮೇರೆಗೆ ಪ್ರತಿಭಟನಾಕಾರರು ಪ್ರತಿಭಟನೆ ವಾಪಸ್ ಪಡೆದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಜೆ.ಬಾಲಗಂಗಾಧರ್, ಹಿರೇಮರಳಿ ಶೀನಪ್ಪ, ವೀರಭದ್ರಸ್ವಾಮಿ, ಗಾಣದಹೊಸೂರು ಕೃಷ್ಣೇಗೌಡ, ಹಿರೇಮರಳಿ ಗ್ರಾ.ಪಂ.ಉಪಾಧ್ಯಕ್ಷ ಮನು, ಮಾಜಿ ಉಪಾಧ್ಯಕ್ಷ ಕೆ.ಸಿ.ಕುಮಾರಸ್ವಾಮಿ, ಸ್ಥಳೀಯ ಗ್ರಾಮಸ್ಥರಾದ ಕೆ.ಹೊಸೂರು ರಮೇಶ್, ಜಗಣ್ಣ, ಸ್ವಾಮಿಗೌಡ, ನಾಗೇಶ್, ಅಶೋಕ, ನವೀನ್, ಸುನೀಲ್, ಜ್ಞಾನೇಶ್, ಆಟೋ ಜಲೇಂದ್ರ ಇತರರು ಭಾಗವಹಿಸಿದ್ದರು.