ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ರೈತ ಸಂಘದ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಅವರ ಜಯಂತಿಯನ್ನು ಆಚರಣೆ ಮಾಡಲಾಯಿತು. ಪ್ರಭುಲಿಂಗು, ಪಣ್ಣೆದೊಡ್ಡಿ ವೆಂಕಟೇಶ್, ಶಿವಲಿಂಗಯ್ಯ, ಮರಲಿಂಗು, ದಿನೇಶ್, ಜಗದೀಶ್, ರಮೇಶ್, ಸ್ವಾಮಿ ಇದ್ದರು. 
ಮಂಡ್ಯ

ರೈತರಿಗೆ ನೈತಿಕ ಶಕ್ತಿಯಾಗಿದ್ದ ಪ್ರೊ.ನಂಜುಂಡಸ್ವಾಮಿ

ಮದ್ದೂರು: ತಾಲೂಕಿನ ಬೆಸಗರಹಳ್ಳಿಯಲ್ಲಿ ರೈತಸಂಘದ ವತಿಯಿಂದ ಶುಕ್ರವಾರ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಜಯಂತಿ ಆಚರಿಸಲಾಯಿತು.
ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಎಸ್.ಪ್ರಭುಲಿಂಗು ಮಾತನಾಡಿ, ಪ್ರೊ.ಎಂ.ಡಿ. ನಂಜುಂಡಸ್ವಾಮಿ ರೈತ ಸಂಘವನ್ನು ಕಟ್ಟುವ ಮೂಲಕ ರೈತರಿಗೆ ನೈತಿಕ ಶಕ್ತಿಯಾಗಿ ನಿಂತವರು. ರೈತರಿಗೆ ಸಮಸ್ಯೆ ಬಂದಾಗ ಸರ್ಕಾರ ವಿರುದ್ಧ ಉಗ್ರ ಹೋರಾಟ ಮಾಡುವ ಮೂಲಕ ರೈತ ಧ್ವನಿಯಾಗಿ ನಿಂತವರು. ರೈತ ಸಂಘಕ್ಕೆ ಹಾಗೂ ರಾಜ್ಯದ ರೈತರಿಗೆ ಇವರ ಕೊಡುಗೆ ಅಪಾರವಾದದ್ದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬೆಸಗರಹಳ್ಳಿ ರೈತ ಸಂಘದ ವೃತ್ತ ಘಟಕ ಘಟಕ ಅಧ್ಯಕ್ಷ ಪಣ್ಣೆದೊಡ್ಡಿ ವೆಂಕಟೇಶ್, ಮುಖಂಡರಾದ ಗುಡಿದೊಡ್ಡಿ ಶಿವಲಿಂಗಯ್ಯ, ಮರಲಿಂಗು, ಮಧು, ದಿನೇಶ್, ಜಗದೀಶ್, ರಮೇಶ್, ಸ್ವಾಮಿ, ಕೆ.ಕೃಷ್ಣಪ್ಪ, ಲೋಕೇಶ್, ಶ್ರೀನಿವಾಸ್, ನಾಗೇಶ್, ಜಯರಾಮು, ರಾಜೇಶ್, ಕುಮಾರ್, ಶಿವರಾಮು, ಚನ್ನಪ್ಪ, ಶಿವರಾಮಣ್ಣ, ಲಿಂಗರಾಜು, ರಾಮಸ್ವಾಮಿ, ಹೊನ್ನಯ್ಯ, ಕೃಷ್ಣಪ್ಪ, ಚಂದು ಇದ್ದರು.