ಮದ್ದೂರು ನಗರದ ಮಳ್ಳವಳಿಯಲ್ಲಿ ರಸ್ತೆಯಲ್ಲಿ ಪ್ರೊ.ನಂಜುಂಡಸ್ವಾಮಿ ಅವರ ಹುಟ್ಟುಹಬ್ಬ ಅಂಗವಾಗಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ವಿ.ಸಿ.ಉಮಾಶಂಕರ್, ಅಲೂರು ಚನ್ನಪ್ಪ, ಎಂ.ಸಿ.ಲಿಂಗರಾಜು, ಉಮೇಶ್ ಇದ್ದರು. 
ಮಂಡ್ಯ

ಹೋರಾಟದ ಕಿಚ್ಚು ಹೆಚ್ಚಿಸಿದ ಪ್ರೊ.ನಂಜುಂಡಸ್ವಾಮಿ

ಮದ್ದೂರು: ರೈತ ಮಕ್ಕಳ ಸಂಘಟನೆ ಕಟ್ಟುವುದರ ಮೂಲಕ ಹೋರಾಟದ ಕಿಚ್ಚು ಹಬ್ಬಿಸಿದ ವಿಶ್ವ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಹೋರಾಟ ಅವಿಸ್ಮರಣೀಯ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ತಿಳಿಸಿದರು.
ನಗರದ ಮಳ್ಳವಳ್ಳಿ ರಸ್ತೆಯಲ್ಲಿ ಪ್ರೊ.ನಂಜುಂಡಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
80 ದಶಕದಲ್ಲಿ ರೈತ ಸಂಘಟನೆ ಸ್ಥಾಪಿಸಿ ರೈತರ ಸ್ವಾಭಿಮಾನದ ಸಂಕೇತ ಹಸಿರು ಶಾಲು ಹೆಗಲ ಮೇಲೆ ಹೊರಿಸಿ ಲಕ್ಷಾಂತರ ರೈತರಿಗೆ ಹೋರಾಟದ ದೀಕ್ಷೆ ನೀಡಿ ಸರ್ಕಾರಗಳ ಅನ್ಯಾಯದ ವಿರುದ್ಧ ಸಿಡಿದೇಳಲು ಉತ್ತೇಜಿಸಿದ ಮಹಾನ್ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ಎಂದು ಬಣ್ಣಿಸಿದರು.
ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ಗೌರವಾಧ್ಯಕ್ಷ ವಿ.ಎಚ್.ಶಿವಲಿಂಗಯ್ಯ, ನಿವೃತ್ತ ಶಿಕ್ಷಕ ಆಲೂರು ಚನ್ನಪ್ಪ, ಪ್ರಧಾನ ಕಾರ್ಯದರ್ಶಿ ಸೊಂಪುರ ಉಮೇಶ್, ಉಪಾಧ್ಯಕ್ಷ ಟೈಲರ್ ರಮೇಶ, ಸಂಘಟನಾ ಕಾರ್ಯದರ್ಶಿ ಎಸ್.ಎಲ್.ಉಮೇಶ್, ಯುವ ಘಟಕದ ಅಧ್ಯಕ್ಷ ವಿಶ್ವಾಸ್, ಮುಖಂಡರಾದ ತೂಬಿನಕೆರೆ ರಾಜು, ಎಂ.ವೀರಪ್ಪ, ಅರುಣ, ಶ್ರೀನಿವಾಸ್, ವರದರಾಜು,ಶಿವರಾಜು,ಶಿವರಾಮು ಇದ್ದರು.