ಕೆ.ಆರ್.ಸಾಗರ ಸಮೀಪದ ಹೊಸ ಉಂಡವಾಡಿಯ ಗಾಯತ್ರಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಭಿತ್ತಿಪತ್ರ ಬಿಡುಗಡೆ ಮಾಡಿದರು. ಎಸ್.ಡಿ.ಬೆನ್ನೂರ, ಜಿ.ಮೋಹನ್, ಡಾ.ಎಂ ಎಸ್.ಪ್ರಫುಲ್ಲ, ಪ್ರವೀಣ್‌ಕುಮಾರ್, ಕೆ.ಆರ್.ನಿರ್ಮಲಾ, ಎಂ.ಸಿ.ಚಂದನ, ಮಾಲಿನಿ ಇದ್ದರು.
- ಹೊಸ ಉಂಡವಾಡಿ ಗ್ರಾಮ
- ಗಾಯತ್ರಿ ವಿದ್ಯಾಸಂಸ್ಥೆ
ಕೆ.ಆರ್.ಸಾಗರ: ಧೂಮಪಾನ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹೊಸ ಉಂಡವಾಡಿ ಗ್ರಾಮದ ಗಾಯತ್ರಿ ವಿದ್ಯಾಸಂಸ್ಥೆಯಲ್ಲಿ ಬುಧವಾರ ಅರಿವು ಕಾರ್ಯಾಗಾರ ಆಯೋಜಿಸಲಾಗಿತ್ತು.
ತಂಬಾಕು ಉತ್ಪನ್ನ, ಸಿಗರೇಟ್ ಹಾಗೂ ಬೀಡಿ ಸೇವನೆಯಿಂದ ಕ್ಯಾನ್ಸರ್, ಹೃದಯ ಸಂಬಂಧಿ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು,ನರ ದೌರ್ಬಲ್ಯ, ನಪುಂಸಕತ್ವ ಮುಂತಾದ ದುಷ್ಪರಿಣಾಮ, ಕೋಟ್ಪಾ ಹಾಗೂ ಬೇಸಿಗೆಯಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಹಾಗೂ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್ ಮಕ್ಕಳಿಗೆ ಅರಿವು ಮೂಡಿಸಿದರು.
ನಂತರ ಶಾಲೆ ಮಕ್ಕಳಿಗೆ ರಸಪ್ರಶ್ನೆ ಸ್ಫರ್ಧೆ ಏರ್ಪಡಿಸಲಾಗಿತ್ತು. ದೇಶಿಕ್ (ಪ್ರಥಮ), ಶರತ್‌ಕುಮಾರ್ (ದ್ವಿತೀಯ), ಗೌತಮ್ (ತೃತೀಯ) ಬಹುಮಾನ ಪಡೆದರು. ತಂಬಾಕು ಉತ್ಪನ್ನಗಳನ್ನು ತ್ಯಜಿಸುವ ಕುರಿತು ಇದೇ ವೇಳೆ ಗಣ್ಯರು ಭಿತ್ತಿ ಪತ್ರ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಎಂ ಎಸ್.ಪ್ರಫುಲ್ಲ, ವಿದ್ಯಾಸಂಸ್ಥೆ ಮುಖ್ಯಸ್ಥ ಪ್ರವೀಣ್‌ಕುಮಾರ್, ಮುಖ್ಯ ಶಿಕ್ಷಕಿ ಕೆ.ಆರ್.ನಿರ್ಮಲಾ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಸಿ.ಚಂದನ, ಆಶಾ ಕಾರ್ಯಕರ್ತೆ ಮಾಲಿನಿ ಇತರರಿದ್ದರು.