ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.  
ಮಂಡ್ಯ

ವಿದ್ಯಾರ್ಥಿಗಳು ಸಮಯಪ್ರಜ್ಞೆ ಬೆಳೆಸಿಕೊಳ್ಳಲಿ: ಅಲಯನ್ಸ್ ಸಂಸ್ಥೆ ಕಾರ್ಯದರ್ಶಿ ಡಾ.ನಾಗರಾಜ್ ವಿ.ಭೈರಿ ಸಲಹೆ

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಪ್ರತಿಭಾ ಪುರಸ್ಕಾರ
  • ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ನಿಂದ ಆಯೋಜನೆ
ಮಂಡ್ಯ: ಸಮಯ ಪ್ರಜ್ಞೆ ಹೆಚ್ಚಿಸಿಕೊಂಡ ವಿದ್ಯಾರ್ಥಿಗಳು ದೊಡ್ಡ ಸಾಧಕರಾಗುತ್ತಾರೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಕಾರ್ಯದರ್ಶಿ ಡಾ.ನಾಗರಾಜ್ ವಿ.ಭೈರಿ ಸಲಹೆ ನೀಡಿದರು.
ನಗರದ ವಕೀಲರ ಸಂಘದ ಸಭಾಂಗಣದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಮಂಡ್ಯ ಜಿಲ್ಲೆ ಹಾಗೂ ಕೃಷಿಕ ಅಲಯನ್ಸ್ ಸಂಸ್ಥೆ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಅಧಿಕಾರ ಸ್ವೀಕಾರ, ಪ್ರತಿಜ್ಞಾವಿಧಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದಿನನಿತ್ಯದ ಸಮಯದೊಂದಿಗೆ ಸೇವೆ ಮಾಡುವುದು. ಸಮಯಪ್ರಜ್ಞೆಯಿಂದ ಓದಿದವರು ದೊಡ್ಡ ಸಾಧಕರಾಗುತ್ತಾರೆ. ಸಮಾಜದಲ್ಲಿ ಅತ್ಯುತ್ತಮ ಸಮಾಜ ಸೇವಕರಾಗುತ್ತಾರೆ. ಸಮಯದ ಮಹತ್ವ ದಿನೇ ದಿನೇ ಹೆಚ್ಚಾಗುತ್ತಿದೆ. ಬಿಡುವಿಲ್ಲದಷ್ಟು ಮನುಷ್ಯ ನಿರತರಾಗುತ್ತಾನೆ ಎಂದು ನುಡಿದರು.
ಅಲಯನ್ಸ್ ಸಂಸ್ಥೆ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಮತ್ತಷ್ಟು ಪ್ರೇರಣೆ ನೀಡಿದಂತಾಗುತ್ತದೆ. ಓದು ಮತ್ತು ಪ್ರತಿಭಾವಂತ ಓದಿಗೂ ವ್ಯತ್ಯಾಸವಿದೆ. ಹೆಚ್ಚು ಸಮಯದಲ್ಲಿ ಓದಿಕೊಂಡರು ಪ್ರತಿಭಾವಂತವಾಗುತ್ತಾರೆ. ಐಎಎಸ್, ಕೆಎಎಸ್, ಐಪಿಎಸ್, ಐಆರ್‌ಎಸ್‌ನಂತ ದೊಡ್ಡ ದೊಡ್ಡ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಆತ್ಮವಿಶ್ವಾಸದಿಂದ ಸಾಧನೆಯ ಗುರಿ ತಲುಪಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಕುಂದುತ್ತಿದೆ. ಎಸ್‌ಎಸ್‌ಎಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ತಕ್ಷಣ ಭಯದಿಂದ ಆತ್ಮಹತ್ಯೆಗೆ ಶರಣಾಗುವುದು ತಪ್ಪು. ಆ ಸಂದರ್ಭದಲ್ಲಿ ಪಾಲಕರು ಹೆಚ್ಚು ಧೈರ್ಯ ತುಂಬಬೇಕು. ಈಗೇನು ಪರೀಕ್ಷೆಗಳನ್ನು ಎರಡು ಅಥವಾ ಮೂರು ಬಾರಿ ಬರೆಯುವ ಅವಕಾಶವಿದೆ. ಪ್ರೌಢಶಾಲಾ ಹಂತದಲ್ಲಿಯೇ ಪ್ರೀತಿ-ಪ್ರೇಮ, ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ವಿದೇಶಗಳ ಶಾಲೆಗಳಲ್ಲಿ ಕಲಿಕೆ ಮತ್ತು ಗಳಿಗೆ ಶಿಕ್ಷಣದ ವ್ಯವಸ್ಥೆ ಇದೆ. ಓದುವಾಗಲೇ ಬಿಡುವಿನ ಸಮಯದಲ್ಲಿ ಕೆಲಸ ಮಾಡಿ ಹಣ ಗಳಿಸಿ ಓದುವವರು ಹೆಚ್ಚಿಸಿದ್ದಾರೆ ಎಂದು ಹೇಳಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಶಿವಕುಮಾರ್, ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಆರ್.ಶಶಿಧರ್ ಈಚೆಗೆರೆ, ಒಂದನೇ ಉಪ ಪ್ರಾಂತಪಾಲ ಚಂದ್ರಶೇಖರ್, ಎರಡನೇ ಉಪ ಪ್ರಾಂತಪಾಲ ಎಂ.ಎಮ್.ಶಿವಣ್ಣ, ಕೃಷಿಕ ಅಲಯನ್ಸ್‌ನ ನಿಕಟ ಪೂರ್ವ ಅಧ್ಯಕ್ಷ ಎ.ಆರ್.ಕುಮಾರ್, ನೂತನ ಅಧ್ಯಕ್ಷ ಡಾ.ಎಚ್.ಅನಿಲ್ಕುಮಾರ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಧನಂಜಯ, ಖಜಾಂಚಿ ವಿ.ಎಸ್.ನಾಗರಾಜು, ಪಿಆರ್‌ಒ ನೀನಾ ಪಟೇಲ್, ಜಿಲ್ಲಾ ರಾಯಭಾರಿ ವೈ.ಎಚ್.ರತ್ನಮ್ಮ, ವಲಯ ಅಧ್ಯಕ್ಷ ಎಸ್.ಎನ್.ಕೃಷ್ಣಪ್ಪ, ಕಾರ್ಯದರ್ಶಿ ಡೇವಿಡ್ ಪ್ರತಿಭಾಂಜಲಿ, ಖಜಾಂಚಿ ಮೋಹನ್‌ಕುಮಾರ್ ಇತರರಿದ್ದರು. ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರತಿಭಾಂಜಲಿ ತಂಡದ ಗಾಯಕರು ಭಾವಗೀತೆ, ಚಿತ್ರಗೀತೆಗಳನ್ನು ಹಾಡಿದರು.