ಯತ್ತಂಬಾಡಿ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯ ಅವರಣದಲ್ಲಿ ವೈದ್ಯಾಧಿಕಾರಿ ಲತಾ ಅವರು ಮಗುವಿಗೆ ಪಲ್ಸ್ ಪೋಲಿಯೋ ಹನಿ ಹಾಕಿದರು. 
ಮಂಡ್ಯ

ಯತ್ತಂಬಾಡಿಯಲ್ಲಿ ಪೋಲಿಯೋ ಲಸಿಕೆಗೆ ಚಾಲನೆ

ಹಲಗೂರು: ಅಂಗವಿಕಲತೆ ಹೋಗಲಾಡಿಸಲು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪಾಲಕರು ಪಲ್ಸ್ ಪೋಲಿಯೋ ಹನಿ ಹಾಕಿಸುವುದರ ಮುಖಾಂತರ ತಮ್ಮ ಮಕ್ಕಳನ್ನು ಅಂಗವಿಕಲತೆಯಿಂದ ದೂರ ಇಡಲು ಸಹಕರಿಸಿ ಎಂದು ಯತ್ತಂಬಾಡಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಲತಾ ಕರೆ ನೀಡಿದರು.
ಯತ್ತಂಬಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಯತ್ತಂಬಾಡಿ ಸೇರಿದಂತೆ ಹೊಸಪುರ, ಹುಲ್ಲೇಗಾಲ, ಹುಲ್ಲಹಳ್ಳಿ, ದಡಮಹಳ್ಳಿ, ಅಂತರವಳ್ಳಿ, ತೊರೆಕಾಡನ ಹಳ್ಳಿ ವ್ಯಾಪ್ತಿಯಲ್ಲಿ ಮೊದಲ ದಿನವಾದ ಭಾನುವಾರ 611 ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಲಾಗಿದೆ. ಈ ದಿನ ಶೇ.96ರಷ್ಟು ಪಲ್ಸ್ ಪೋಲಿಯೋ ಹನಿ ಹಾಕಲಾಗಿದೆ. ಸೋಮವಾರ ಹಾಗೂ ಮಂಗಳವಾರ ಉಳಿದ ಮಕ್ಕಳಿಗೆ ಆಶಾ ಕಾರ್ಯಕರ್ತರು ಮತ್ತು ಸಿಬ್ಬಂದಿ ಮನೆ ಮನೆಗೆ ತೆರಳಿ ಪಲ್ಸ್ ಪೋಲಿಯೋ ಹನಿ ಹಾಕಲಾಗುತ್ತದೆ ಎಂದು ತಿಳಿಸಿದರು.
ನಮಗೆ ಸರ್ಕಾರದ ವತಿಯಿಂದ ವಾಹನ ಸೌಲಭ್ಯ ನೀಡಲಾಗಿದ್ದು ತುಂಬ ಅನುಕೂಲವಾಗಿದೆ. ಈಗ ಮಧ್ಯಂತರ ಅವಧಿಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಂಡ ಉದ್ದೇಶವೆಂದರೆ ಯುದ್ಧದ ಪರಿಣಾಮದಿಂದ ಬೇರೆ ಕಡೆಯಿಂದ ನಮ್ಮ ದೇಶಕ್ಕೆ ಜನರು ವಲಸೆ ಬಂದಿರುವುದು, ಅವರ ಮಕ್ಕಳಿಗೆ ಪೋಲಿಯೋ ಆಗದಂತೆ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.