ಬಲಮುರಿ ಮತ್ತು ಎಡಮುರಿ ಪ್ರವಾಸಿ ತಾಣದಲ್ಲಿನ ಪ್ರವಾಸಿಗರಿಗೆ ಮೈಕ್ ಮೂಲಕ ಮಾಹಿತಿ ನೀಡಿದ ಪೊಲೀಸರು. 
ಮಂಡ್ಯ

ಪ್ರವಾಸಿಗರನ್ನು ವಾಪಸ್ ಕಳುಹಿಸಿದ ಪೊಲೀಸರು

ಕೆ.ಆರ್.ಸಾಗರ : ಬಲಮುರಿ ಮತ್ತು ಎಡಮುರಿಯ ಹಲವು ಕಡೆ ನದಿಯಲ್ಲಿ ಇಳಿದಿದ್ದ ನೂರಾರು ಪ್ರವಾಸಿಗರನ್ನು ಕೆ.ಆರ್.ಸಾಗರ ಪೊಲೀಸರು ತಡೆದು ವಾಪಸ್ ಕಳುಹಿಸಿದರು.
ಬಲಮುರಿ ಹಾಗೂ ಎಡಮುರಿ ಸೇರಿದಂತೆ ಕಾವೇರಿ ತೀರದ ಪ್ರದೇಶಗಳಲ್ಲಿ ಮೋಜಿಗಾಗಿ ನೀರಿಗೆ ಇಳಿದ ಪ್ರವಾಸಿಗರು ಸಾವನ್ನಪ್ಪುತ್ತಿದ್ದ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಿ ತಹಸೀಲ್ದಾರ್ ಆದೇಶ ಹೊರಡಿಸಿದ್ದರು. ಈ ಮಾಹಿತಿ ತಿಳಿಯದ ಅದೆಷ್ಟೋ ಜನ ಪ್ರವಾಸಿಗರು ನೀರಿನಲ್ಲಿ ಇಳಿದು ಆಟವಾಡುತ್ತಿದ್ದ ಹಿನ್ನೆಲೆಲ್ಲಿ ಸ್ಥಳಕ್ಕೆ ಬಂದ ಕೆ.ಆರ್.ಸಾಗರ ಠಾಣೆಯ ಪಿಎಸೈ ರಮೇಶ್ ಕರ್ಕಿಕಟ್ಟೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿರುವ ವಿಷಯವನ್ನು ಗಮನಕ್ಕೆ ತಂದು ಎಲ್ಲರನ್ನು ವಾಪಸ್ ಕಳುಹಿಸಿದರು.
ಇದೇ ಸಂದರ್ಭದಲ್ಲಿ ಪ್ರವಾಸಿಗರಿಗೆ ನದಿಯಲ್ಲಿ ತೀರದಲ್ಲಿ ಇಳಿಯದಂತೆ ನಿಷೇಧವಿದ್ದು, ಅಕ್ರಮವಾಗಿ ಇಳಿದರೆ ಕಾನೂನು ಕ್ರಮ ಜರುಗಿಸುವುದಾಗಿ ಮೈಕ್ ಮೂಲಕ ಮಾಹಿತಿ ನೀಡಿದರು. ಅಪರಾಧ ವಿಭಾಗದ ಪಿಎಸ್‌ಐ ಸುಷ್ಮಾ ಮತ್ತು ಸಿಬ್ಬಂದಿ ಇದ್ದರು.