ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡತ 
ಮಂಡ್ಯ

ಮೇ 21ರಂದು ಕರ್ನಾಟಕ ಸಂಘದಲ್ಲಿ ಕಾವ್ಯಧಾರೆ: ಆಕಾಶವಾಣಿ ಮೈಸೂರು ಸಹಯೋಗ

ಪ್ರಮುಖ ಮುಖ್ಯಾಂಶಗಳು

  • ಮುಂಗಾರು ಮಳೆ-ಇಳೆ: ಕಾವ್ಯಧಾರೆ ಎಂಬ ಶೀರ್ಷಿಕೆಯಡಿ ಆಯೋಜನೆ
  • 20 ಜನ ಕವಿಗಳಿಂದ ಕವನ ವಾಚನ
ಮಂಡ್ಯ: ಆಕಾಶವಾಣಿ ಮೈಸೂರು ಹಾಗೂ ಕರ್ನಾಟಕ ಸಂಘದ ಸಹಯೋಗದಲ್ಲಿ ಮೇ 21ರಂದು ನಗರದಲ್ಲಿ ಮುಂಗಾರು ಮಳೆ-ಇಳೆ: ಕಾವ್ಯಧಾರೆ ಎಂಬ ಶೀರ್ಷಿಕೆಯಡಿ ಮಂಡ್ಯ, ಮೈಸೂರು, ಚಾಮರಾಜನಗರಗಳನ್ನು ಒಳಗೊಂಡಂತೆ ಕಾವ್ಯಗೋಷ್ಠಿ ಆಯೋಜಿಸಲಾಗಿದೆ.
ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ವಿಶ್ರಾಂತ ಪ್ರಾಂಶುಪಾಲೆ ಡಾ.ಲೀಲಾ ಅಪ್ಪಾಜಿ ಉದ್ಘಾಟಿಸಲಿದ್ದಾರೆ. ಆಕಾಶವಾಣಿ ಸಹಾಯಕ ನಿರ್ದೇಶಕ ಮಂಜುನಾಥ್ ಎನ್.ಬೇದ್ರೆ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎಂ.ಕೇಶವಮೂರ್ತಿ ಮುಖ್ಯಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. 20 ಜನ ಕವಿಗಳು ಕವನ ವಾಚನ ಮಾಡಲಿದ್ದಾರೆ.
ಕಾವ್ಯಧಾರೆ

ಅಂತೆಯೇ ಮಧ್ಯಾಹ್ನ 2.30 ರಿಂದ 4.30ರವರೆಗೆ ಯುವ ಬರಹಗಾರರಿಗೋಸ್ಕರ ಬಾನುಲಿ ಬರವಣಿಗೆ-ಕಾರ್ಯಾಗಾರ ಎಂಬ ಶೀರ್ಷಿಕೆಯಡಿ ಬಾನುಲಿ ನಾಟಕ, ವಿಶೇಷ ರೂಪಕ, ಚಿಂತನ ಮತ್ತು ಭಾಷಣ ಕುರಿತಾಗಿ ಲೇಖನ, ನಿರೂಪಣೆಯನ್ನು ಯಾವ ರೀತಿ ನಿರ್ವಹಿಸಬೇಕೆಂಬುದರ ಬಗ್ಗೆ ಮೂರು ಜನ ನುರಿತ ಕಾರ್ಯಕ್ರಮಾಧಿಕಾರಿಗಳು ಮಾರ್ಗದರ್ಶನ ಮಾಡಲಿದ್ದಾರೆ. 100 ಜನ ಯುವ ಬರಹಗಾರರಿಗೆ ಕಾಯಾರ್ರ್ಗಾರದಲ್ಲಿ ಭಾಗವಹಿಸಲು ಅವಕಾಶವಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.