ಹಲಗೂರು ನಾಡಕಚೇರಿಯಲ್ಲಿ ಕೆಂಪೇಗೌಡ ಜಯಂತಿ ಆಚರಿಸಲಾಯಿತು.ಜೆ.ಲತಾ, ಸಿದ್ದರಾಯ ಮೌಳಿ, ನರಸಪ್ಪ ಇತರರಿದ್ದರು.
- ಉಪತಹಸೀಲ್ದಾರ್ ಕೆ. ನಟರಾಜು ಬಣ್ಣನೆ
ಹಲಗೂರು: ಇಲ್ಲಿನ ಮಳವಳ್ಳಿ ರಸ್ತೆಯಲ್ಲಿರುವ ನಾಡಕಚೇರಿಯಲ್ಲಿ ಕೆಂಪೇಗೌಡರ ಜಯಂತಿ ಆಚರಿಸಲಾಯಿತು.
ಕೆಂಪೇಗೌಡರ ಭಾವಚಿತ್ರಕ್ಕೆ ಉಪತಹಸೀಲ್ದಾರ್ ಕೆ. ನಟರಾಜು ಪುಷ್ಪನಮನ ಸಲ್ಲಿಸಿದರು. ನಂತರ ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯದಲ್ಲಿದ್ದ ಬೆಂದಕಾಳೂರನ್ನು ಸುಂದರ ಬೆಂಗಳೂರನ್ನಾಗಿ ಪರಿವರ್ತಿಸಿದ ಇವರು, ಕೆರೆಕಟ್ಟೆಗಳನ್ನು ಅಭಿವೃದ್ಧಿ ಪಡಿಸುವುದರ ಜತೆಗೆ ದೀನದಲಿತರ ಏಳಿಗೆಗಾಗಿ ಶ್ರಮಿಸಿದವರು ಎಂದರು.
ಗ್ರಾಮ ಲೆಕ್ಕಾಧಿಕಾರಿ ಗಳಾದ ಜೆ.ಲತಾ, ಸಿದ್ದರಾಯ ಮೌಳಿ, ನರಸಪ್ಪ, ಗ್ರಾಮ ಸಹಾಯಕರಾದ ಜೆ.ಎಸ್. ಶಿವಪ್ರಕಾಶ್, ಮಹದೇವಸ್ವಾಮಿ, ಪುಟ್ಟಸ್ವಾಮಿ, ಜೆ. ಎಸ್. ಅನಿಲ್ ಕುಮಾರ್, ನವೀನ, ಹಲಗೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುರೇಂದ್ರ, ಎನ್. ಕೆ ಕುಮಾರ್ ಇತರರು ಇದ್ದರು.