ಕಿಕ್ಕೇರಿ: ಸಮೀಪದ ಮಂದಗೆರೆ ಗ್ರಾಮದಲ್ಲಿ ಪಾಳುಬಿದ್ದ ಮನೆಯಿಂದ ಹಾವು, ಚೇಳಿನಂತಹ ವಿಷಜಂತುಗಳ ಹಾವಳಿ ಹೆಚ್ಚಾಗಿದ್ದು, ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತಿವೆ ಎಂದು ನಟ ಮಧು ಮಂದಗೆರೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದಾರೆ.
ಶಿಥಿಲವಾಗಿರುವ ಮನೆಯಿಂದ ಪಕ್ಕದ ಮನೆಗಳಿಗೆ ವಿಷಜಂತುಗಳು ನುಗ್ಗುವಂತಾಗಿದೆ. ಪ್ರಾಣಭಯದಿಂದ ಮನೆಯಲ್ಲಿ ವಾಸ ಮಾಡಬೇಕಾದ ಸ್ಥಿತಿ ಇದೆ. ಈ ಪ್ರದೇಶದಲ್ಲಿ ಶುಚಿಮಾಡಲು ಗ್ರಾಮ ಪಂಚಾಯಿತಿಗೆ ಸಾಕಷ್ಟು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.