ಕಾರು ಡಿಕ್ಕಿ 
ಮಂಡ್ಯ

ಕಾರು ಡಿಕ್ಕಿಯಾಗಿ ಪಾದಚಾರಿ ಮೃತ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಮೊಗರಹಳ್ಳಿ ಗ್ರಾಮ
  • ಮೈಸೂರು- ಕೆ.ಆರ್.ಸಾಗರ ಮುಖ್ಯ ರಸ್ತೆ
  • ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ
ಕೆ.ಆರ್.ಸಾಗರ: ಸಮೀಪದ ಮೊಗರಹಳ್ಳಿ ಗ್ರಾಮದ ಮೈಸೂರು- ಕೆ.ಆರ್.ಸಾಗರ ಮುಖ್ಯ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸೋಮವಾರ ಮೃತಪಟ್ಟಿದ್ದಾರೆ.
ಮೊಗರಹಳ್ಳಿ ಗ್ರಾಮದ ಮುರುಗ (45) ಮೃತಪಟ್ಟವ. ಮಂಗಳೂರು ಮೂಲದ ಕಾರು ಮೈಸೂರು ಕಡೆಯಿಂದ ಕೆ.ಆರ್.ಸಾಗರದ ಕಡೆಗೆ ಅತಿವೇಗದಿಂದ ಬರುತ್ತಿದ್ದ ಸಂದರ್ಭದಲ್ಲಿ ಪಾದಚಾರಿಗೆಡ ಡಿಕ್ಕಿ ಹೊಡೆದಿದೆ.
ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಅಪಘಾತ ಮಾಡಿದ ವಾಹನ ಮತ್ತು ಚಾಲಕನನು ವಶಕ್ಕೆ ಪಡೆದು ಪ್ರಕರಣ ದಾಖಲುಬಮಾಡಿದ್ದಾರೆ.