ಕಿಕ್ಕೇರಿ ಕೆಪಿಎಸ್ ಪಿಯು ಕಾಲೇಜಿನಲ್ಲಿ ಬುಧವಾರ ಸಂವಿಧಾನ ದಿನಾಚರಣೆ ಆಚರಿಸಲಾಯಿತು. ಕೃಷ್ಣೇಗೌಡ, ಎಂ.ಆರ್. ಸಹದೇವ, ಕುಮಾರಸ್ವಾಮಿ, ವಿನಾಯಕ, ರವೀಂದ್ರ, ನಾಗೇಶ್, ಸಹನಾ ಹಾಜರಿದ್ದರು.  
ಮಂಡ್ಯ

ವಿಶ್ವ ಮೆಚ್ಚುವ ಸಂವಿಧಾನ ನಮ್ಮದು

ಎಂ.ರವಿ
ಕಿಕ್ಕೇರಿ: ವಿಶ್ವವೇ ಮೆಚ್ಚಿರುವ ನಮ್ಮ ಸಂವಿಧಾನವನ್ನು ಗೌರವಿಸಿ, ಸಂವಿಧಾನದ ಸಿದ್ಧಾಂತಗಳನ್ನು ಪಾಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಕೆಪಿಎಸ್ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ತಿಳಿಸಿದರು.
ಇಲ್ಲಿನ ಕೆಪಿಎಸ್ ಪಿಯು ಕಾಲೇಜು ವಿಭಾಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹುಟ್ಟಿನಿಂದ ಸಾಯುವವರೆಗೆ ಕಾನೂನು ಚೌಕಟ್ಟಿನಲ್ಲಿ ನೆಮ್ಮದಿಯ ಬದುಕು ಸಾಗಿಸಲು ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ ಬೇಕಿದೆ ಎಂದರು.
ಎಲ್ಲ ದೇಶಗಳಿಗಿಂತ ಅತಿ ಹೆಚ್ಚು ಅನುಚ್ಛೇದವನ್ನು ಸಂವಿಧಾನದಲ್ಲಿ ಹೊಂದಿದೆ. 1949ರ ನ.26ರಲ್ಲಿ ಸಂವಿಧಾನ ಜಾರಿಗೆ ಆಗಿ, 1950 ಜ.26 ಅಂಗೀಕಾರವಾಗಿದೆ. ನಮ್ಮ ಸಂವಿಧಾನ 395 ಅನುಚ್ಛೇದ, 28ಭಾಗಗಳು, 8 ಷೆಡ್ಯೂಲ್‌ಗಳಿವೆ. ನಮ್ಮ ಮೂಲಭೂತ ಹಕ್ಕು, ಕರ್ತವ್ಯ, ಮತದಾನದಂತಹ ಅನೇಕ ಸಂಗತಿಗಳು ಎಲ್ಲರ ಬದುಕಿಗೆ ಉಸಿರಾಗುವಂತೆ ಸಂವಿಧಾನವಿದ್ದು ಅದನ್ನು ಗೌರವಿಸಿ, ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಪ್ರಾಂಶುಪಾಲ ಎಂ.ಆರ್.ಸಹದೇವ ಮಾತನಾಡಿ, ಸಂವಿಧಾನದ ಮುಖ್ಯ ಉದ್ಧೇಶವನ್ನು ಶಾಲಾ ಕಾಲೇಜು ಹಂತದಲ್ಲಿ ತಿಳಿಸಿದರೆ ನೆಮ್ಮದಿ, ಶಾಂತಿಯ ಬದುಕು ಮುಂದಿನ ದಿನದಲ್ಲಿ ಸಿಗಲಿದೆ ಎಂದು ಮಾಹಿತಿ ನೀಡಿದರು.
ಎನ್‌ಎಸ್‌ಎಸ್ ಘಟಕಾಧಿಕಾರಿ ಕುಮಾರಸ್ವಾಮಿ, ವಿನಾಯಕ, ರವೀಂದ್ರ, ನಾಗೇಶ್, ಸಹನಾ ಮತ್ತಿತರರಿದ್ದರು.