ಮೇಲುಕೋಟೆ: ಹೋಬಳಿಯ ಬೆಳ್ಳಾಳೆ ಸರ್ಕಾರಿ ಫ್ರೌಡಶಾಲೆ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮೇಲುಕೋಟೆ: ಹೋಬಳಿಯ ಬೆಳ್ಳಾಳೆ ಸರ್ಕಾರಿ ಫ್ರೌಡಶಾಲೆ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ನಾಗಮಂಗಲ ಹಳ್ಳಿಕೆರೆ ಗ್ರಾಮದ ಸೋಮೇಶ್ (35) ಮೃತ. ಇಲ್ಲಿನ ಮೈಸೂರು-ಜೀವರ್ಗಿ ಹೆದ್ದಾರಿಯ ಬೆಳ್ಳಾಳೆ ಬಳಿ ಶನಿವಾರ ನಾಗಮಂಗಲದಿಂದ ಮೈಸೂರು ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಮತ್ತೊಂದು ದ್ವಿಚಕ್ರ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ನಿಂದ ಕೆಳಗೆ ಬಿದ್ದ ಯುವಕನ ತಲೆಗೆ ಗಾಯಗೊಂಡು ತೀವ್ರ ರಕ್ತ ಸ್ರಾವದಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಬೈಕ್ ಸವಾರನ ಸ್ಥಿತಿ ಗಂಭೀರವಾಗಿದ್ದು, ಮೈಸೂರು ಖಾಸಗಿ ಆಸ್ವತ್ರೆಗೆ ದಾಖಲು ಮಾಡಲಾಗಿದೆ.
ಸರ್ಕಲ್ ಇನ್‌ಸ್ಪೆಪೆಕ್ಟರ್ ಶರತಗೌಡ, ಸಬ್ ಇನ್‌ಸ್ಪೆಕ್ಟರ್ ಪ್ರಮೋದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಮೇಲುಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಇದೇ ಮಾರ್ಗದಲ್ಲಿ ಸಂಚಾರಿಸುವಾಗ ಅಪಘಾತ ಕಂಡು ಗಾಯಗಳಿಗೆ ಧೈರ್ಯ ತುಂಬಿ ಆಂಬುಲೆನ್ಸ್ ಮೂಲಕ ಆಸ್ವತ್ರೆಗೆ ರವಾನಿಸಲು ನೆರವಾದರು.