ಮಂಡ್ಯ ನಗರದಲ್ಲಿ ಪ್ರಾಂತಪಾಲ ಮಾದೇಗೌಡ ಅವರ ಅಧಿಕೃತ ಭೇಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು.  
ಮಂಡ್ಯ

ಅಗತ್ಯವಿರುವವರಿಗೆ ಸೇವೆ ಸಲ್ಲಿಸುವುದೇ ಧ್ಯೇಯ: ಅಲಯನ್ಸ್ ಜಿಲ್ಲಾ ಪ್ರಾಂತಪಾಲ ಮಾದೇಗೌಡ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಅಲಯನ್ಸ್ ಕ್ಲಬ್ ಗಳ ಪ್ರಾಂತಪಾಲರ ಅಧಿಕೃತ ಭೇಟಿ
  • ವಾರ್ಷಿಕ ವರದಿ ಮಂಡನೆ
ಮಂಡ್ಯ: ಅವಶ್ಯಕತೆ ಇರುವವರಿಗಾಗಿ ವಿವಿಧ ಸಾಮಾಜಿಕ ಸೇವೆ ಸಲ್ಲಿಸುವುದೇ ಆಲಯನ್ಸ್ ಸಂಸ್ಥೆಯ ಧ್ಯೇಯ ಎಂದು ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್‌ನ ಜಿಲ್ಲಾ ಪ್ರಾಂತಪಾಲ ಮಾದೇಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ಅಶೋಕನಗರದಲ್ಲಿರುವ ಪ್ರತಿಭಾಂಜಲಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರತಿಭಾಂಜಲಿ ಅಲಯನ್ಸ್ ಕ್ಲಬ್ ಹಾಗೂ ಶುಗರ್ ಸಿಟಿ ಅಲಯನ್ಸ್ ಕ್ಲಬ್ ಗಳ ಪ್ರಾಂತಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾನ ಮನಸ್ಕ ಸದಸ್ಯರು ಸ್ನೇಹಪರತೆಯಿಂದ ಒಂದೆಡೆ ಸೇರಿ ಸಮಾಜದಲ್ಲಿರುವ ಆಶಕ್ತರನ್ನು ಗುರುತಿಸಿ ಅವರಿಗೆ ನೆರವಾಗಬೇಕು. ಸ್ನೇಹ ಹಾಗೂ ಸೇವೆಯೇ ಅಲಯನ್ಸ್‌ನ ಮೂಲ ಆಶಯ ಎಂದರು.
ಒಂದನೇ ಪ್ರಾಂತಪಾಲ ಕೆ.ಆರ್.ಶಶಿಧರ ಮಾತನಾಡಿ, ಮುಂದಿನ ಬಾರಿ ಜಿಲ್ಲೆಯ ಎಲ್ಲ ಕ್ಲಬ್‌ಗಳು ಅತ್ಯುತ್ತಮ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಮನವಿ ಮಾಡಿದರು.
ಎರಡನೇ ಪ್ರಾಂತಪಾಲ ಚಂದ್ರಶೇಖರ ಕೀಲಾರ ಮಾತನಾಡಿ, ಸೇವೆಯ ಜತೆಗೆ ಸೇವಾ ಮನೋಭಾವನೆವುಳ್ಳವರನ್ನು ಕ್ಲಬ್‌ಗೆ ಸೇರ್ಪಡೆಗೊಳಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸಂಪುಟ ಕಾರ್ಯದರ್ಶಿ ನಾಗರಾಜ್, ಪ್ರತಿಭಾಂಜಲಿ ಕ್ಲಬ್ ಅಧ್ಯಕ್ಷ ಸಂತೋಷ್, ಶುಗರ್ ಸಿಟಿ ಕ್ಲಬ್ ಅಧ್ಯಕ್ಷ ನಾಗರಾಜು, ಪದಾಧಿಕಾರಿಗಳಾದ ಲೋಕೇಶ್, ಸೋಮಶೇಖರ್, ಸರಿತಾ, ವಂದನಾ, ಕಾವ್ಯಾ, ಪ್ರತಿಭಾ, ರಾಧಾಕೃಷ್ಣ, ಮುರುಳಿ ಇತರರಿದ್ದರು. ಕ್ಲಬ್‌ನ ಸಲಹೆಗಾರ ಪ್ರತಿಭಾಂಜಲಿ ಡೇವಿಡ್ ವಾರ್ಷಿಕ ವರದಿ ಮಂಡಿಸಿದರು.