ಮದ್ದೂರು ನಗರದ ಶ್ರೀಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನ ಸದಸ್ಯರಾಗಿ ಆಯ್ಕೆಯಾದವರನ್ನು ಅಭಿನಂದಿಸಲಾಯಿತು. 
ಮಂಡ್ಯ

ಜಗಜ್ಯೋತಿ ಬಸವೇಶ್ವರ ಸಂಘಕ್ಕೆ ನೂತನ ಸದಸ್ಯರ ಆಯ್ಕೆ

ಪ್ರಮುಖ ಮುಖ್ಯಾಂಶಗಳು

  • Jagajyoti Basaveshwara Sangha
ಮದ್ದೂರು: ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿ ಸದಸ್ಯರ ಚುನಾವಣೆಯು ನಗರದ ಕೇಂಬ್ರಿಡ್ಜ್ ಕಾನ್ವೆಂಟ್‌ನಲ್ಲಿ ಇತ್ತೀಚೆಗೆ ಜರುಗಿತು.
12 ಸದಸ್ಯರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 25 ಆಕಾಂಕ್ಷಿತರು ಸ್ಪರ್ಧೆ ಮಾಡಿದ್ದರು. ಅಂತಿಮವಾಗಿ ಚುನಾವಣೆ ನಡೆದು ನೂತನ ನಿರ್ದೇಶಕರಾಗಿ ಒಂದೇ ಬಣದ ಸಿ.ಜಿ.ಗೌರಿಶಂಕರ್ ಕೆಸ್ತೂರು, ಎಂ.ವೀರಭದ್ರಸ್ವಾಮಿ ಮದ್ದೂರು, ಬಸವರಾಜು ಭೀಮನಕೆರೆ, ಪಿ.ರಾಜಶೇಖರ್ ಮದ್ದೂರು, ಕೆ.ಬಿ.ಗಿರೀಶ್ ಕಾರ್ಕಹಳ್ಳಿ, ಎಲ್.ಎಸ್.ಮಹೇಶ್ ಶಿವಪುರ, ಬಿ.ವಿ.ಮಂಜುನಾಥ್ ಮದ್ದೂರು, ಎಚ್.ಬಿ.ಸ್ವಾಮಿ ಮದ್ದೂರು, ಎಂ.ಸಿದ್ದಲಿಂಗಪ್ರಸಾದ್ ಮಡೇನಹಳ್ಳಿ, ಜೆ.ಕವಿತಾ ಕೆ.ಎಂ.ದೊಡ್ಡಿ, ಎಸ್.ಸಿದ್ದಮ್ಮ ಮದ್ದೂರು, ಬಿ.ಎಸ್.ನಾಗರಾಜು ಬೆಸಗರಹಳ್ಳಿ ಚುನಾಯಿತರಾದರು.
ಸಂತೋಷ್ ಕುಮಾರ್ ಅವರು ಚುನಾವಣಾಧಿಕಾರಿ ಕರ್ತವ್ಯ ನಿರ್ವಹಿಸಿದ್ದರು. ಸಂಘದ ಕಾರ್ಯನಿರ್ವಹಣಾಧಿಕಾರಿ ರಾಜಮಣಿ ಇದ್ದರು. ಈ ವೇಳೆ ಸಿಹಿ ಹಂಚಿ, ನೂತನ ಸದಸ್ಯರಿಗೆ ಹೂವಿನ ಹಾರ ಹಾಕಿ ಸಂಭ್ರಮಿಸಿದರು.