ಗೋವಾದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಬಿ.ಎಸ್.ಅನುಪಮಾ ಅವರಿಗೆ ರಾಷ್ಟ್ರೀಯ ರೋಟರಿ ಚಾಂಪಿಯನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
- ರಾಷ್ಟ್ರೀಯ ರೋಟರಿ ಚಾಂಪಿಯನ್ ಪ್ರಶಸ್ತಿ
- ಮರ್ಪಿತ ಸೇವೆ, ಮಾದರಿ ನಾಯಕತ್ವ ಹಾಗೂ ಸಮಾಜಮುಖಿ ಕಾರ್ಯಕ್ಕೆ ಗೌರವ
ಮಂಡ್ಯ: ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಅವರಿಗೆ ರೋಟರಿಯಲ್ಲಿನ ಸಮರ್ಪಿತ ಸೇವೆ, ಮಾದರಿ ನಾಯಕತ್ವ ಹಾಗೂ ಸಮಾಜಮುಖಿ ಕಾರ್ಯಕ್ಕೆ ರಾಷ್ಟ್ರೀಯ ರೋಟರಿ ಚಾಂಪಿಯನ್ ಪ್ರಶಸ್ತಿ ಒಲಿದಿದೆ.
ಬಿ.ಎಸ್.ಅನುಪಮಾ ಅವರು 2022-23ರಲ್ಲಿ ರೋಟರಿ ಕ್ಲಬ್ ಮಂಡ್ಯ 3192ರ ಅಧ್ಯಕ್ಷೆಯಾಗಿ ಹಾಗೂ 2025-26ನೇ ಸಾಲಿನಲ್ಲಿ ರೋಟರಿ ಸಹ ಪಾಲಕಿಯಾಗಿ ಗಮನಾರ್ಹ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು. ರೋಟರಿಯ ಸ್ವಾರ್ಥರಹಿತ ಸೇವೆ ಎಂಬ ಧ್ಯೇಯವನ್ನು ಪಾಲಿಸಿಕೊಂಡು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸೇವಾ ಮನೋಭಾವ ಮತ್ತು ನಾಯಕತ್ವ ಇತರರಿಗೆ ಸ್ಫೂರ್ತಿಯಾಗಿದೆ. ರೋಟರಿ ಕುಟುಂಬದ ಬಾಂಧವ್ಯವನ್ನು ಬಲಪಡಿಸುವಲ್ಲಿ ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗೆ ನೀಡಿರುವ ಅವರ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ಗೋವಾದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಬಿ.ಎಸ್.ಅನುಪಮಾ ಅವರಿಗೆ ಪ್ರಮಾಣಪತ್ರ ಪ್ರದಾನ ಮಾಡಲಾಯಿತು. ಅಂತೆಯೇ ಸೇವಾ ಮನೋಭಾವ, ನಾಯಕತ್ವ ಮತ್ತು ಮಾನವೀಯ ಕಾಳಜಿಯ ಮೂಲಕ ಸಮಾಜದಲ್ಲಿ ಅರ್ಥಪೂರ್ಣ ಬದಲಾವಣೆ ತರಲು ಹಾಗೂ ರೋಟರಿ ಸೇವಾ ಪಯಣಕ್ಕೆ ಮತ್ತಷ್ಟು ಪ್ರೇರಣೆ ನೀಡಲಿ ಎಂದು ಹಾರೈಸಲಾಯಿತು.
ದಕ್ಷಿಣ ಆಫ್ರಿಕಾದ ರೋಟರಿ ಇಂಟರ್‌ನ್ಯಾಷನಲ್ ಅಧ್ಯಕ್ಷ ರೊ ಒಲಾಯಿಂಕ ಹಕೀ ಮ್ ಬಾಬಲೋಲ, ಗೋವಾ ಜಿಲ್ಲಾ ಪಾಲಕ ಲೆನಿನ್, ಅಂತಾರಾಷ್ಟ್ರೀಯ ನಿರ್ದೇಶಕ ಕೆ.ಪಿ.ನಾಗೇಶ್ ಇತರರಿದ್ದರು.