ಟಿಎಪಿಸಿಎಂಎಸ್ ನಿರ್ದೇಶಕ ಎಚ್.ಟಿ.ಲೋಕೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಾಟಕಗಳು ಪ್ರದರ್ಶನಗೊಳ್ಳುತ್ತಿರುವುದು ಸಂತಸದ ವಿಚಾರ. ಕಲಾವಿದರ ಪರಿಶ್ರಮಕ್ಕೆ ಸಾರ್ವಜನಿಕರು ಬೆಂಬಲ ನೀಡಬೇಕು ಎಂದರು.
ಪೌರಾಣಿಕ ನಾಟಕಗಳು ಮನರಂಜನೆಯ ಜತೆಗೆ ಜೀವನದ ಮೌಲ್ಯ, ಸತ್ಯ-ಧರ್ಮದ ಮಹತ್ವವನ್ನು ತಿಳಿಸಿಕೊಡುತ್ತವೆ ಎಂದು ಆರ್‌ಟಿಒ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಹೇಳಿದರು.
ಕಸಬಾ ಹೋಬಳಿ ಕಾಮನಹಳ್ಳಿ ಗ್ರಾಮದಲ್ಲಿ ಶ್ರೀ ವಡ್ಗಲಮ್ಮ ದೇವಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಆಯೋಜಿಸಿದ್ದ ಭಕ್ತ ಪ್ರಹ್ಲಾದ ಅಥವಾ ಹಿರಣ್ಯಕಶ್ಯಪ ವಧೆ ಪೌರಾಣಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಅಳಿವಿನಂಚಿನಲ್ಲಿರುವ ಪೌರಾಣಿಕ ರಂಗಕಲೆಯನ್ನು ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿ. ಕಲಾವಿದರು ತಿಂಗಳುಗಟ್ಟಲೇ ಕಷ್ಟಪಟ್ಟು ಅಭ್ಯಾಸ ಮಾಡಿದ್ದು, ಸಾರ್ವಜನಿಕರು ನಾಟಕ ವೀಕ್ಷಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಬೇಕು. ಕಾಮನಹಳ್ಳಿಯಲ್ಲಿ ಸಾವಿರಾರು ಜನರು ನಾಟಕ ವೀಕ್ಷಣೆಗೆ ಆಗಮಿಸಿರುವುದು ಸಂತಸದ ಸಂಗತಿ ಎಂದರು.
ಈ ಸಂದರ್ಭದಲ್ಲಿ ಚೌಡೇನಹಳ್ಳಿ ನಾಗರಾಜು, ಜವರೇಗೌಡ, ಕೃಷ್ಣೇಗೌಡ, ವಿಜಯಕುಮಾರ್, ಕೆ.ಎಲ್.ಮಹೇಶ್, ಸೋಮಶೇಖರ್, ಗೋಪಾಲಕೃಷ್ಣ ಸೇರಿದಂತೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಉಪಸ್ಥಿತರಿದ್ದರು.
ಕೆ.ಆರ್.ಪೇಟೆ ತಾಲೂಕಿನ ಕಾಮನಹಳ್ಳಿಯಲ್ಲಿ ನಡೆದ ಭಕ್ತ ಪ್ರಹ್ಲಾದ ಅಥವಾ ಹಿರಣ್ಯಕಶ್ಯಪ ವಧೆ ಪೌರಾಣಿಕ ನಾಟಕವನ್ನು ಆರ್‌ಟಿಒ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಹಾಗೂ ಗಣ್ಯರು ಉದ್ಘಾಟಿಸಿದರು. ಎಚ್.ಟಿ.ಲೋಕೇಶ್, ಚೌಡೇನಹಳ್ಳಿ ನಾಗರಾಜು, ಜವರೇಗೌಡ, ಕೃಷ್ಣೇಗೌಡ, ವಿಜಯಕುಮರ್, ಕೆ.ಎಲ್.ಮಹೇಶ್, ಸೋಮಶೇಖರ್ ಇತರರಿದ್ದರು.