ಕೆ.ಆರ್.ಸಾಗರ: ಇಲ್ಲಿನ ಅರಳಿಕಟ್ಟೆ ಬಳಿಯ ಬಸ್ ನಿಲ್ದಾಣದಲ್ಲಿ ಜು.7ರಂದು ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮದ ರಾಕೇಶ್ (23) ಕೊಲೆಯಾದವ. ಅದೇ ಗ್ರಾಮದ ಅಂಬರೀಷ್ ಬಂಧಿತ.
ಮೃಸೂರಿನ ಬಡಾವಣೆಯೊಂದರಲ್ಲಿ ಅಂಬರೀಷ್ ಜತೆಗೆ ರಾಕೇಶ್ ಕೆಲಸಕ್ಕೆ ತೆರಳುತ್ತಿದ್ದ. ಇದರ ನಡುವೆ ರಾಕೇಶ್ ಕೊಲೆಯಾಗಿರುವ ಕುರಿತು ಆತನ ತಾಯಿ ಜ್ಯೋತಿ, ಅಂಬರೀಷ್ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದರು.
ಮಂಡ್ಯ ಎಸ್ಪಿ ಹಾಗೂ ಡಿವೈಎಸ್‌ಪಿ ಮಾರ್ಗದರ್ಶನದಲ್ಲಿ ತನಿಖೆ ಆರಂಭಿಸಿದ ಕೆ.ಆರ್.ಸಾಗರ ವೃತ್ತದ ಸಿಪಿಐ ವಿವೇಕಾನಂದ ನೇತೃತ್ವದ ತಂಡ ತನಿಖೆ ನಡೆಸಿ ಬಂಡಿಹೊಳೆಯ ಅಂಬರೀಷ್‌ನನ್ನು ಕೆ.ಆರ್.ಪೇಟೆಯ ಅಕ್ಕಿಹೆಬ್ಬಾಳು ಬಳಿ ವಶಕ್ಕೆ ಪಡೆದಿದೆ.
ಜು.7ರಂದು ಬೆಳಗ್ಗೆಯಿಂದ ಇಬ್ಬರೂ ಕುಡಿದಿದ್ದು, ಊಟ ಸಿಗದ ಕಾರಣ ರಾಕೇಶ್‌ನೊಂದಿಗೆ ಜಗಳವಾಗಿದೆ. ಈ ವೇಳೆ ಕೋಪಗೊಂಡು ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಅಂಬರೀಷ್ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಶ್ರೀರಂಗಪಟ್ಟಣದ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.