ಮಳವಳ್ಳಿ ಪಟ್ಟಣದಿಂದ ಕೆಎಸ್ ಆರ್‌ಟಿಸಿ ಬಸ್ ನಲ್ಲಿ ಮೈಸೂರಿಗೆ ಪ್ರಯಾಣಿಕರನ್ನು ತುಂಬಿಸಿಕೊಂಡು ಶುಕ್ರವಾರ ತೆರಳುತ್ತಿದ್ದಾಗ ಚಾಲಕ ವಿ.ಮಹೇಶ್ ಮೊಬೈಲ್ ವೀಕ್ಷಣೆ ಮಾಡಿಕೊಂಡು ಚಾಲನೆ ಮಾಡುತ್ತಿರುವುದು.  
ಮಂಡ್ಯ

ಮೊಬೈಲ್ ಫೋನ್ ಬಳಸುತ್ತಿದ್ದ ಚಾಲಕ ಅಮಾನತು

ಎ. ಆರ್. ರಘುರಾಮ
ಮಳವಳ್ಳಿ : ರಸ್ತೆ ಸಾರಿಗೆ ಸಂಸ್ಥೆ ಚಾಲಕನೊಬ್ಬ ಮೊಬೈಲ್ ಫೋನ್ ವೀಕ್ಷಣೆ ಮಾಡಿಕೊಂಡು ಬಸ್ ಚಾಲನೆ ಮಾಡುತ್ತಿದ್ದ ಆರೋಪದ ಮೇಲೆ ಸೇವೆಯಿಂದ ಶನಿವಾರ ಅಮಾನತುಗೊಂಡಿದ್ದಾನೆ.
ಪಟ್ಟಣದ ಡಿಪೋದ ವಿ. ಮಹೇಶ್ ಶುಕ್ರವಾರ ಪ್ರಯಾಣಿಕರನ್ನು ತುಂಬಿಸಿಕೊಂಡು ಮೈಸೂರಿಗೆ ತೆರಳುತ್ತಿದ್ದರು.
ಈ ವೇಳೆ ರೀಲ್ಸ್ ನೋಡಿಕೊಂಡು ಚಾಲನೆ ಮಾಡುತ್ತಿದ್ದರು. ಇದನ್ನು ಪ್ರಯಾಣಿಕರೊಬ್ಬರು
ಮೊಬೈಲ್ ಫೋನಿನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು, ಚಾಲಕ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಮಂಡ್ಯ ವಿಭಾಗೀಯ ನಿಯಂತ್ರಣಾಧಿಕಾರಿ ಶರಣ ಬಸವರಾಜು ಅವರು
ಅಮಾನತು ಆದೇಶ ಹೊರಡಿಸಿದ್ದಾರೆ.