ಬೆಂಗಳೂರಿನ ನಾಗರಬಾವಿಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಟೋ ಚಾಲಕರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಫುಡ್ ಕಿಟ್ ಹಾಗೂ ಆರ್ಥಿಕ ನೆರವು ನೀಡಿದರು.  
ಮಂಡ್ಯ

ಆಟೋ ಚಾಲಕರಿಗೆ ಶಾಸಕ ರವಿಕುಮಾರ್ ನೆರವು: ಫುಡ್‌ಕಿಟ್, ಬಟ್ಟೆ ಹಾಗೂ ಆರ್ಥಿಕ ಸಹಾಯ

ಪ್ರಮುಖ ಮುಖ್ಯಾಂಶಗಳು

  • ಯುದ್ದದಿಂದ ತೈಲೋತ್ಪನ್ನ ಹಾಗೂ ಆಟೋ ಗ್ಯಾಸ್ ಅಭಾವ ಸೃಷ್ಠಿ
  • ಒಂದು ಸಾವಿರ ಜನಕ್ಕೂ ಹೆಚ್ಚು ಚಾಲಕರಿಗೆ ಸಹಾಯ
ಮಂಡ್ಯ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ದದಿಂದ ತೈಲೋತ್ಪನ್ನ ಹಾಗೂ ಆಟೋ ಗ್ಯಾಸ್ ಅಭಾವ ಸೃಷ್ಠಿಯಿಂದ ನಲುಗಿರುವ ಆಟೋ ಚಾಲಕರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ನೆರವಾಗಿದ್ದಾರೆ.
ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಂಗಳೂರು ನಗರದಲ್ಲಿರುವ ಐನೂರು ಜನ ಆಟೋ ಚಾಲಕರಿಗೆ ಒಂದು ತಿಂಗಳಿಗೆ ಆಗುವಷ್ಟು ಫುಡ್‌ಕಿಟ್, ಬಟ್ಟೆ ಹಾಗೂ ಆರ್ಥಿಕ ನೆರವು ನೀಡಿದ್ದಾರೆ. ಇದು ಎರಡನೇ ಹಂತವಾಗಿ ನಡೆದ ವಿತರಣೆ ಕಾರ್ಯಕ್ರಮ. ಕಳೆದ ವಾರ ಐನೂರು ಜನ ಆಟೋ ಚಾಲಕರಿಗೂ ಇದೇ ರೀತಿ ನೆರವಿನ ಹಸ್ತ ಚಾಚಿದ್ದರು.
ಈ ವೇಳೆ ಮಾತನಾಡಿದ ಅವರು, ಅಮೇರಿಕಾ ಮತ್ತು ಇರಾನ್ ಸೇರಿದಂತೆ ಹಲವು ರಾಷ್ಟ್ರಗಳ ನಡುವೆ ಕಳೆದ ಒಂದೂವರೆ ತಿಂಗಳಿಂದ ನಡೆಯುತ್ತಿರುವ ಯುದ್ಧದಿಂದ ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಸಮರ್ಪಕ ಗ್ಯಾಸ್ ದೊರೆಯದೇ ಆಟೋ ಚಾಲಕರು ಜೀವನ ನಡೆಸಲು ದುಸ್ಥರಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ನೈತಿಕ ಧೈರ್ಯ ತುಂಬಲು ಫುಡ್‌ಕಿಟ್ ಹಾಗೂ ಆರ್ಥಿಕ ನೆರವು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.