ಪಾಂಡವಪುರ ಉಪವಿಭಾಗೀಯ ಆಸ್ಪತ್ರೆ ಸಿಬ್ಬಂದಿಗೆ ವಿಶ್ವ ಹಾಲು ದಿನಾಚರಣೆಯ ಅಂಗವಾಗಿ ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹಾಲು ಮತ್ತು ಹಾಲಿನ ಉತ್ಪನ್ನಗಳ ಕಿಟ್ ವಿತರಿಸಿದರು. 
ಮಂಡ್ಯ

ಹಾಲಿನ ಉತ್ಪನ್ನಗಳ ಕಿಟ್ ವಿತರಣೆ

ಪಾಂಡವಪುರ: ವಿಶ್ವ ಹಾಲು ದಿನಾಚರಣೆಯ ಅಂಗವಾಗಿ ಪಟ್ಟಣದಲ್ಲಿ ಮನ್‌ಮುಲ್ ವತಿಯಿಂದ ಪುರಸಭೆ ಪೌರಕಾರ್ಮಿಕರು, ಉಪವಿಭಾಗೀಯ ಆಸ್ಪತ್ರೆ ಒಳ ರೋಗಿಗಳು, ವೈದ್ಯರು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಪಶು ಆಸ್ಪತ್ರೆ ವೈದ್ಯರು, ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಕಿಟ್‌ಗಳನ್ನು ಮುನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಸೋಮವಾರ ವಿತರಿಸಿದರು.
ಬಳಿಕ ಮಾತನಾಡಿ, ವಿಶ್ವಹಾಲು ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಪುರಸಭೆಯ ಪೌರಕಾರ್ಮಿಕರು, ಆಸ್ಪತ್ರೆಯ ರೋಗಿಗಳಿಗೆ ಹಾಗೂ ಪಶು ವೈದ್ಯಕೀಯ ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಕಿಟ್ ಅನ್ನು ವಿತರಣೆ ಮಾಡಿದ್ದೇವೆ. ಸಾರ್ವಜನಿಕರು ರೈತರು ಕೆಎಂಎಫ್ ಒಕ್ಕೂಟದ ಅಭಿವೃದ್ಧಿಗೆ ಶ್ರಮಿಸಬೇಕು.
ರಾಜ್ಯದ 25 ಲಕ್ಷ ರೂ.ಗೂ ಅಧಿಕ ರೈತರು ಹೈನುಗಾರಿಕೆ ಮೇಲೆ ಅವಲಂಬಿತರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಕೆಎಂಎಫ್ ನಂದಿನಿ ಬ್ರಾಂಡ್ ಹೆಸರಿನಲ್ಲಿ ದೇಶದ ವಿವಿಧ ರಾಜ್ಯಗಳಿಗೆ ಹಾಲು ಪೂರೈಕೆ ಮಾಡುತ್ತಿದೆ. ರೈತರು ಮತ್ತು ಸಾರ್ವಜನಿಕರು ನಂದಿನಿ ಹಾಲನ್ನು ಹೆಚ್ಚು, ಹೆಚ್ಚು ಖರೀದಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮನ್‌ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಹಾಲು ಮಾರಾಟ ವ್ಯವಸ್ಥಾಪಕಿ ಶಶಿಕಲಾ, ಡಾ.ಸಂತೋಷ್, ಮಾರ್ಗವಿಸ್ತರ್ಣಾಧಿಕಾರಿ ಉಷಾ, ಮಧುಶಂಕರ್, ನಾಗೇಂದ್ರ, ಪ್ರಜ್ವಲ್, ಟೆಕ್ನಿಷಿನ್ ಆನಂದ್, ಪುರಸಭೆಯ ಮಾಜಿ ಸದಸ್ಯರಾದ ಆರ್.ಸೋಮಶೇಖರ್, ಜ್ಯೋತಿಲಕ್ಷ್ಮೀ, ಮುಖಂಡರಾದ ಬೀರಶೆಟ್ಟಹಳ್ಳಿ ಶಿವಣ್ಣ, ಅರ‌್ಮುಗಂ, ಚಂದ್ರು, ಜಯರಾಮು, ಹಾರೋಹಳ್ಳಿ ಉಮೇಶ್, ಪಿ.ಎಲ್.ಆದರ್ಶ, ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ಇತರರು ಇದ್ದರು.