ಗಾಂಧಿ ಗ್ರಾಮ ಪುರಸ್ಕಾರ ಪಡೆದ ಮೇಲುಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಹರಿಧರ್, ಉಪಾಧ್ಯಕ್ಷ ಜಿ.ಕೆ.ಕುಮಾರ್, ಪಿಡಿಒ ರಾಜೇಶ್ವರ್ ಪ್ರಶಸ್ತಿಯನ್ನು ವಿಧಾನಸೌಧದ ಎದುರಿನ ಗಾಂಧೀಜಿ ಪತ್ರಿಮೆಗೆ ಅರ್ಪಿಸಿದರು.
ಮೇಲುಕೋಟೆ: ಮೇಲುಕೋಟೆ ಗ್ರಾಮ ಪಂಚಾಯಿತಿಗೆ 4ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ.
ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಗ್ರಾಪಂ ಅಧ್ಯಕ್ಷೆ ಭವಾನಿ ಹರಿಧರ್, ಉಪಾಧ್ಯಕ್ಷ ಜಿ.ಕೆ.ಕುಮಾರ್, ಅಭಿವೃದ್ಧಿ ಅಧಿಕಾರಿ ರಾಜೇಶ್ವರ್ ಗಾಂಧಿ ಗ್ರಾಮ ಪುರಸ್ಕಾರದ ಫಲಕ, 5ಲಕ್ಷ ರೂ. ಚೆಕ್ ಸ್ವೀಕರಿಸಿದರು.
ಮೇಲುಕೋಟೆ ಗ್ರಾಮ ಪಂಚಾಯಿತಿ ಒಟ್ಟು ನಾಲ್ಕು ಬಾರಿ ಪುರಸ್ಕಾರ ಪಡೆದ ಗ್ರಾಪಂ ಎಂಬ ಹೆಗ್ಗಳಿಕೆ ಪಡೆದಿದೆ. ಸೋಮವಾರ ಪ್ರಶಸ್ತಿ ಸ್ವೀಕರಿಸಿದ ಗ್ರಾಪಂ ಸಿಬ್ಬಂದಿ ವಿಧಾನಸೌಧದ ಎದುರಿರುವ ಗಾಂಧೀಜಿ ಪತ್ರಿಮೆಗೆ ಅರ್ಪಿಸಿದರು.
ಆನ್‌ಲೈನ್, ಸಕಾಲ ಸೇವೆಗಳು, ಸಾರ್ವಜನಿಕರಿಗೆ ಸವಲತ್ತುಗಳ ವಿತರಣೆ, ಯೋಜನೆಗಳ ಅನುಷ್ಠಾನ, ಗ್ರಾಮಸಭೆ, ವಿಶೇಷ ಸಭೆ, ವಾರ್ಡ್‌ಸಭೆ, ಮಕ್ಕಳ ಮತ್ತು ಮಹಿಳಾ ಗ್ರಾಮಸಭೆ, ಕೆಡಿಪಿ ಸಭೆಗಳನ್ನು ಪಂಚತಂತ್ರ 2.0 ಮೂಲಕ ಸಮರ್ಪಕ ಅನುಷ್ಠಾನ, ಶಾಲೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನದ ರ‌್ಯಾಂಕಿಂಗ್ ಆಧಾರದ ಮೇಲೆ ಗ್ರಾಮ ಪಂಚಾತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.