ಮೇಲುಕೋಟೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೋಮವಾರ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಯರಾಮೇಗೌಡ, ಸದಸ್ಯರಾದ ಜಿ.ಕೆ ಕುಮಾರ್ , ಭಾಗ್ಯಮ್ಮ ಲಕ್ಷ್ಮಮ್ಮ, ಪಿಡಿಒ ರಾಜೇಶ್ವರ್ ಇತರರು ಇದ್ದ್ದರು.  
ಮಂಡ್ಯ

ಕಾಮಗಾರಿ ಗುಣಮಟ್ಟ ಪಾಲನೆಗೆ ಆದ್ಯತೆ ನೀಡಿ

ಎ. ಆರ್. ರಘುರಾಮ
ಮೇಲುಕೋಟೆ : ಮೇಲುಕೋಟೆ ವಿವಿಧೆಡೆ ಎರಡು ಕೋಟಿ ರೂ. ವೆಚ್ಚದ ಕಾಂಕ್ರೀಟ್ ರಸ್ತೆಗಳ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೋಮವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕಾಮಗಾರಿ ಗುಣಮಟ್ಟ ಪಾಲನೆಗೆ ಆದ್ಯತೆ ನೀಡಬೇಕು ಎಂದರು. ಮೇಲುಕೋಟೆಯ ಎಲ್ಲ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು. ಕ್ಷೇತ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಿ ಪ್ರವಾಸಿ ಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಮುಂಬರುವ ಮಾ. 28 ರಂದು ವೈರಮುಡಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸ ಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಮೇಲುಕೋಟೆಯಲ್ಲಿ ಅಧಿಕಾರಿಗಳು ಮತ್ತು ದೇವಾಲಯದ ಪ್ರಮುಖರ ಸಭೆ ಕರೆಯಲಾಗುತ್ತದೆ ಎಂದರು. ಮೇಲುಕೋಟೆಯಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಕ್ಕೆ ಪಾಂಡವಪುರ ಕ್ಷೇತ್ರಶಿಕ್ಷಣಾಧಿಕಾರಿ ವರದಿ ಸಲ್ಲಿಸಿದ್ದು, ಸರ್ಕಾರದಿಂದ ಇನ್ನೆರಡು ದಿನಗಳಲ್ಲಿ ಆದೇಶ ಬರಲಿದೆ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಯರಾಮೇಗೌಡ, ಸದಸ್ಯರಾದ ಜಿ.ಕೆ ಕುಮಾರ್ , ಭಾಗ್ಯಮ್ಮ ಲಕ್ಷ್ಮಮ್ಮ, ಪಿಡಿಒ ರಾಜೇಶ್ವರ್, ರೈತಸಂಘದ ಮುಖಂಡರಾದ ದಿಲೀಪ್ ಯೋಗಿ, ಗಂಗಾಧರ, ರಾಮಸ್ವಾಮಿ ಅಯ್ಯಂಗಾರ್ ಸೇರಿದಂತೆ ಹಲವರು ಇದ್ದ್ದರು.