ಮದ್ದೂರು ತಾಲೂಕಿನ ಹುಳಗನಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿದರು. ಎಚ್.ಕೆ.ನಂದೀಶ್‌ಗೌಡ, ವೀಣಾ, ಕಮಲಾಕ್ಷಿ, ಜ್ಯೋತಿ, ಅಪ್ಪಾಜಿಗೌಡ ಇದ್ದರು.
ಮದ್ದೂರು : ಶುದ್ಧ ಕುಡಿಯುವ ನೀರು ಸೇವನೆಯಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಹೆಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ಹುಳಗನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನೂತನವಾಗಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದದರು. ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಚ್.ಕೆ.ನಂದೀಶ್‌ಗೌಡ ಅವರ ಸೇವಾ ಮನೋಭಾವದಿಂದ ಅತ್ಯಾಧುನಿಕ ಮತ್ತು ಹೈಟೆಕ್ ಮಾದರಿಯ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿರುವುದು ಮಾದರಿ ಸೇವೆ ಎಂದರು.
ತಮ್ಮನ್ನು ಗ್ರಾ.ಪಂ.ಸದಸ್ಯರನ್ನಾಗಿ ಆಯ್ಕೆಗೊಳಿಸಿರುವ ಸ್ಥಳೀಯ ಸಾರ್ವಜನಿಕರಿಗೆ ಕೈಲಾದ ಸೇವೆಯನ್ನು ಮಾಡಬೇಕೆಂಬ ಉದ್ದೇಶದಿಂದ ವಿಧಾನ ಪರಿಷತ್ ಸದಸ್ಯರಾದ ಕೆ.ಗೋವಿಂದರಾಜು ರವರಿಂದ 5 ಲಕ್ಷ ರೂ. ಅನುದಾನ ಮತ್ತು ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಆರ್ಥಿಕ ನೆರವು ಒದಗಿಸಿ ಮತ್ತು ಸ್ಥಳೀಯ ಗ್ರಾ.ಪಂ ವತಿಯಿಂದ ಶುದ್ದ ಕುಡಿಯುವ ನೀರಿನ ಯಂತ್ರೋಪಕರಣಗಳ ಖರೀದಿಗೆ ಕ್ರಮ ವಹಿಸಿರುವ ಗ್ರಾ.ಪಂ.ಮಾಜಿ ಅಧ್ಯಕ್ಷ ನಂದೀಶ್‌ಗೌಡರ ಕಾರ್ಯ ಶ್ಲಾಘಿಸಿದರು.
ಟ್ರಸ್ಟ್ ಕಳೆದ ಹಲವಾರು ವರ್ಷಗಳಿಂದಲೂ ಸಮಾ ಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದೆ.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ಸಾಕ್ಸ್, ಮೊಟ್ಟೆ ಮತ್ತು ವಾಹನ ಸೌಲಭ್ಯವನ್ನು ಕಲ್ಪಿಸಿದೆ. ಮುಂಬರುವ ದಿನಗಳಲ್ಲೂ ಉತ್ತಮವಾಗಿ ಸೇವೆ ನಿರ್ವಹಿಸಲಿದೆ ಎಂದರು. ಗ್ರಾ.ಪಂ.ಅಧ್ಯಕ್ಷೆ ವೀಣಾ, ಸದಸ್ಯರಾದ ಕಮಲಾಕ್ಷಿ, ಜ್ಯೋತಿ, ಅಪ್ಪಾಜಿಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಕೆ.ನಂದೀಶ್‌ಗೌಡ ಹಾಗೂ ಗ್ರಾಮದ ಯಜಮಾನರು ಹಾಜರಿದ್ದರು.