ಮದ್ದೂರಿನ ಪುರಾಣ ಪ್ರಸಿದ್ಧ ಶ್ರೀ ಉಗ್ರ ನರಸಿಂಹ ದೇಗುಲದ ಆವರಣದಲ್ಲಿ ಶ್ರೀದೇವಿ ಪ್ರೀ ಸ್ಕೂಲ್‌ನ ವತಿಯಿಂದ ಸಂಕ್ರಾಂತಿ ಸಂಭ್ರಮ ಅಂಗವಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸೌಮ್ಯಾ ನವೀನ್‌ಕುಮಾರ್, ಎನ್.ನಿತಿನ್ ಕುಮಾರ್, ಗಾಯತ್ರಿ ಇತರರು ಇದ್ದರು. 
ಮಂಡ್ಯ

ಶ್ರೀದೇವಿ ಪ್ರೀ ಸ್ಕೂಲ್ ಸಂಕ್ರಾಂತಿ ಸಂಭ್ರಮ,

ಎ. ಆರ್. ರಘುರಾಮ
ಮದ್ದೂರು: ವಿದ್ಯಾರ್ಥಿಗಳು ಪಠ್ಯದ ಜತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸುಪ್ತ ಪ್ರತಿಭೆ ಅನಾವರಣ ಮಾಡಬೇಕೆಂದು ಶ್ರೀದೇವಿ ಪ್ರೀ ಸ್ಕೂಲ್ ಪ್ರಾಂಶುಪಾಲೆ ಸೌಮ್ಯಾ ನವೀನ್‌ಕುಮಾರ್ ತಿಳಿಸಿದರು.
ನಗರದ ಪುರಾಣ ಪ್ರಸಿದ್ಧ ಉಗ್ರ ನರಸಿಂಹ ದೇಗುಲದ ಆವರಣದಲ್ಲಿ ಭಾನುವಾರ ಶಾಲೆ
ಹಮ್ಮಿಕೊಂಡಿದ್ದ ಶ್ರೀದೇವಿ ಸಂಕ್ರಾಂತಿ ಸಂಭ್ರಮ, ರಂಗೋಲಿ ಸ್ಪರ್ಧೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳಿಗೆ ಆಟ, ಪಾಠ ದೊಂದಿಗೆ ಮಾನವೀಯ ಮೌಲ್ಯ, ಸಂಸ್ಕೃತಿ ಹಾಗೂ ಆತ್ಮವಿಶ್ವಾಸ ರೂಢಿಸಬೇಕು. ಇದರಿಂದ ಸೃಜನಶೀಲತೆ ವೃದ್ಧಿಯಾಗುತ್ತದೆ. ಮಕರ ಸಂಕ್ರಾಂತಿಯು ಉತ್ತರಾಯಣದ ಸಂಕೇತವಾಗಿದ್ದು, ಪರಂಪರೆ ಹಾಗೂ ಕೃಷಿಯ ಮಹತ್ವವನ್ನು ತಿಳಿಸುತ್ತದೆ ಎಂದರು. ನೆರೆಹೊರೆಯವರು ಒಟ್ಟಾಗಿ ಸೇರಿ ಹಬ್ಬ ಆಚರಿಸುವುದರಿಂದ ಏಕತೆ ಮತ್ತು ಸಹೋದರತ್ವ ಬೆಳೆಯುತ್ತದೆ ಎಂದರು.
ಬಹುಮಾನ ವಿತರಣೆ: ರಂಗೋಲಿ ಸ್ಪರ್ಧೆಯಲ್ಲಿ ಭವಾನಿ (ಪ್ರ), ಜಯಲಕ್ಷ್ಮೀ (ದ್ವಿ), ಸಿಂಧು (ತೃ)
ಬಹುಮಾನ ಪಡೆದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಶಾಲೆ ವತಿಯಿಂದ ನೆನಪಿನ ಕಾಣಿಕೆ ನೀಡಲಾಯಿತು. ಸಂಸ್ಥೆ ಕಾರ್ಯದರ್ಶಿ ಎನ್.ನಿತಿನ್‌ಕುಮಾರ್, ರೈಲ್ವೆ ಸಲಹಾ ಸಮಿತಿ ಸದಸ್ಯೆ ಮಮತಾ ಚಂದನ್ ರಾಂಕ, ನಿವೃತ್ತ ಶಿಕ್ಷಕಿ ಗಾಯತ್ರಿ ಇತರರಿದ್ದರು.