ಪಾಂಡವಪುರ ಪಟ್ಟಣದಲ್ಲಿ ಐದುದೀಪದ ವೃತ್ತದಲ್ಲಿ ಮ್ಯಾರಥಾನ್ ಓಟದ ಸ್ಪರ್ಧೆಗೆ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಚಾಲನೆ ನೀಡಿದರು. ಭಾರತ್ ಕ್ಯಾನ್ಸರ್ ಆಸ್ಪತ್ರೆ ವೈದ್ಯ ಡಾ.ಚೇತನ್, ಎಸ್‌ಬಿಐ ರೀಜನಲ್ ಮ್ಯಾನೇಜರ್ ವೀರಭದ್ರೇಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ಸಬ್ ಇನ್ಸ್‌ಪೆಕ್ಟರ್ ಉಮೇಶ್ ಇತರರು ಇದ್ದರು.
ಪಾಂಡವಪುರ: ಸಾರ್ವಜನಿಕರಿಗೆ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಭಾರತ್ ಕ್ಯಾನ್ಸರ್ ಆಸ್ಪತ್ರೆ, ಎಸ್‌ಬಿಐ ಮತ್ತು ಶ್ರೀ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಸಹಕಾರದೊಂದಿಗೆ ಭಾನುವಾರ ಏರ್ಪಡಿಸಿದ್ದ ಮ್ಯಾರಥಾನ್‌ನಲ್ಲಿ ನೂರಾರು ಸಾರ್ವಜನಿಕರು, ಯುವಜನರು, ಮಹಿಳೆಯರು, ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಗಮನಸೆಳೆದರು.
ಪಟ್ಟಣದ ಐದು ದೀಪದ ವೃತ್ತದಲ್ಲಿ ಮ್ಯಾರಥಾನ್‌ಗೆ ಚಾಲನೆ ನೀಡಿದ ಸಂದರ್ಭ ಮಾತನಾಡಿದ ಭಾರತ್ ಕ್ಯಾನ್ಸರ್ ಆಸ್ಪತ್ರೆ ವೈದ್ಯ ಡಾ.ಚೇತನ್, ಜಂಕ್‌ಫುಡ್ ಸೇವನೆಯಿಂದ ದೂರವಿದ್ದು, ತಂಬಾಕು ಸೇವನೆ ತ್ಯಜಿಸಿದರೆ ಕ್ಯಾನ್ಸರ್ ಬಾಹುಗಳಿಂದ ತಪ್ಪಿಸಿಕೊಳ್ಳಬಹುದು ಎಂದರು. ಕ್ಯಾನ್ಸರ್ ಬಂದ ವ್ಯಕ್ತಿಗಳಿಗೆ ಅದು ಎರಡು ಮತ್ತು ಮೂರನೇ ಹಂತಕ್ಕೆ ತಲುಪಿದಾಗ ಮಾತ್ರ ಅದರ ಗುಣಲಕ್ಷಣಗಳು ಕಾಣುತ್ತವೆ. ಅಲ್ಲಿಯವರೆಗೆ ಪರೀಕ್ಷೆ ಮಾಡಿಸಿಕೊಂಡರೆ ಮಾತ್ರ ತಿಳಿಯುತ್ತದೆ ಎಂದರು. ವಂಶಾವಳಿಯಿಂದ ತಂಬಾಕು ಸೇವನೆ ಮಾಡಿದವರಿಗೂ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಜಾಗೃತರಾಗಬೇಕು ಎಂದು ಅವರು ತಿಳಿಸಿದರು.
ಆರೋಗ್ಯ ಪಾಲನೆ ಮಾಡಿಕೊಳ್ಳಬೇಕು :
ಓಟದ ಸ್ಪರ್ಧೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಿ ಮಾತನಾಡಿ, ಕ್ಯಾನ್ಸರ್ ಮಾರಕವಾದ ಕಾಯಿಲೆ. ಇದು ಬರುವುದು ಯಾರಿಗೂ ಗೊತ್ತಾಗುವುದಿಲ್ಲ. ಕ್ರೀಡೆ, ವ್ಯಾಯಾಮದಿಂದ ಆರೋಗ್ಯ ಪಾಲನೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಪ್ರತಿಯೊಬ್ಬರೂ ನಿಯಮಿತವಾಗಿ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡು ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಮುಕ್ತರಾಗಬೇಕು ಎಂದರು. ಈ ನಿಟ್ಟಿನದಲ್ಲಿ ಜನರಿಗೆ ಅರಿವು ಮೂಡಿಸುವ ಸಲುವಾಗಿ ತಪಾಸಣಾ ಶಿಬಿರ ನಡೆಸುತ್ತಿರುವುದು ಮಾದರಿ ಕಾರ್ಯ ಎಂದರು. ಮ್ಯಾರಥಾನ್‌ನಲ್ಲಿ ಅವರು ಸ್ವತಃ ಭಾಗವಹಿಸುವ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದರು. ರಾಘವ ಪ್ರಕಾಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ಸಬ್ ಇನ್ಸ್‌ಪೆಕ್ಟರ್ ಉಮೇಶ್
ಎಸ್‌ಬಿಐ ರೀಜನಲ್ ಮ್ಯಾನೇಜರ್ ವೀರಭದ್ರೇಗೌಡ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ.ಹೊನ್ನರಾಜು, ಮ್ಯಾನೇಜಿಂಗ್ ಟ್ರಸ್ಟಿ ಪಂಚಲಿಂಗೇಗೌಡ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಇದೇ ವೇಳೆ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಪುಸ್ತಕ ಪ್ರೇಮಿ ಅಂಕೇಗೌಡ ಅವರನ್ನು ಅಭಿನಂದಿಸಲಾಯಿತು. ಮ್ಯಾರಥಾನ್‌ನಲ್ಲಿ ವಿಜೇತರ ವಿವರ ಇಂತಿದೆ.
14 ವರ್ಷ ಒಳಗಿನ ಪುರುಷರು: ಆಕಾಶ್ ಮೀನಾ(ಪ್ರ), ಸುಭಾಷ್‌ಗೌಡ(ದ್ವಿ), ಅಮೋಘ ಉಡುಪ (ತೃ). ಬಾಲಕಿಯರ ವಿಭಾಗ: ಸಂಜನಾ (ಪ್ರ), ಇಂಚರ(ದ್ವಿ), ಮೇಘನಾ(ತೃ).
18 ವರ್ಷ ಒಳಗಿನ ಪುರುಷರು: ಕಪಥನ್ ಸಿಂಗ್(ಪ್ರ), ಆನಂದ್ ಸಾಕಲ್(ದ್ವಿ), ಚಂದನ್ ಶೇಖರ್(ತೃ).
ಮಹಿಳೆಯರ ವಿಭಾಗ: ರಂಜಿತಾ (ಪ್ರ), ಅನನ್ಯಾ (ದ್ವಿ), ಮಮತಾ (ತೃ).
30ವರ್ಷ ಒಳಗಿನ ಪುರುಷರು: ರಾಜೇಶ್ ಕುಮಾರ್ (ಪ್ರ), ವೈಭವ್ ಮಾರುತಿ ಪಾಟೀಲ್(ದ್ವಿ), ಅಬ್‌ತಂ (ತೃ). 30 ವರ್ಷದ ಒಳಗಿನ ಮಹಿಳೆಯ ವಿಭಾಗ:- ತಮನ್ನಾ (ಪ್ರ), ಮೋನಿಕಾ (ದ್ವಿ), ವಿನುತಾ (ತೃ).
30 ವರ್ಷ ಮೇಲಿನ ಪುರುಷರು: ಗೌತಮ್ (ಪ್ರ), ಸಂದೀಪ್ (ದ್ವಿ), ಕುಮಾರ್ (ತೃ).