ಮಳವಳ್ಳಿ ತಾಲೂಕಿನ ಬಿ.ಜಿ.ಪುರ ಮಂಟೇಸ್ವಾಮಿ ಮಠದ ಪೀಠಾಧಿಕಾರಿ ಶ್ರೀಜ್ಞ್ಞಾನಾನಂದ ಚನ್ನರಾಜೇ ಅರಸು ಅವರು ಐದನೇ ಫಲಾರದಯ್ಯನ ಕೊನೆ ಪಂಕ್ತಿ ಸೇವೆಯ ಅಂಗವಾಗಿ ಶುಕ್ರವಾರ ಮೆರವಣಿಗೆ ಮೂಲಕ ದೊಡ್ಡಮ್ಮತಾಯಿ ಗದ್ದುಗೆ ಪೂಜೆಗೆ ತೆರಳುತ್ತಿರುವುದು.
ಮಳವಳ್ಳಿ: ತಾಲೂಕಿನ ರಾಜ ಬೋಪ್ಪೇಗೌಡನಪುರ(ಬಿ.ಜಿ.ಪುರ) ಗ್ರಾಮದ ಪರಂಜ್ಯೋತಿ ಶ್ರೀಧರೆಗೆ ದೊಡ್ಡವರು ಮಂಟೇಸ್ವಾಮಿ ಮಠಕ್ಕೆ ಐದನೇ ಪಂಕ್ತಿ ಸೇವೆ ಪ್ರಯುಕ್ತ ಶುಕ್ರವಾರ ನಡೆದ ಫಲಾರದಯ್ಯನ ಸೇವೆಯಲ್ಲಿ ಸಹಸ್ರಾರು ಭಕ್ತರು ಆಗಮಿಸಿ ಗದ್ದುಗೆ ದರ್ಶನ ಪಡೆಯುವ ಮೂಲಕ ಮಂಟೇಸ್ವಾಮಿ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು.
ಕಳೆದ ಹದಿನೈದು ದಿನಗಳ ಹಿಂದೆ ಪ್ರಾರಂಭವಾದ ಎದರು ಸೇವೆ ಜಾತ್ರಾಮಹೋತ್ಸವದಲ್ಲಿ ಜಾತ್ಯತೀತ ಸಮಾಜದ ಏಳಿಗೆಗೆ ಸಾರುವ ನಾಲ್ಕು ಪಂಕ್ತಿ ಸೇವೆಗಳನ್ನು ನೆರವೇರಿಸಲಾಗಿದೆ.
ಶುಕ್ರವಾರ ಮುಂಜಾನೆಯಿಂದ ಹಲವು ಪೂಜಾ ಕೈಂಕರ್ಯಗಳನ್ನು ಶ್ರೀಮಠದ ಪೀಠಾಧಿಕಾರಿ ಶ್ರೀಜ್ಞ್ಞಾನಾನಂದ ಚನ್ನರಾಜೇಅರಸು ಅವರು ನೆರವೇರಿಸಿದರು.