ಕೆ.ಆರ್.ಸಾಗರ ಸಮೀಪದ ಬೆಳಗೊಳ ಗ್ರಾಮದಲ್ಲಿ ಸುಮಾರು 48.34 ಲಕ್ಷ ರೂ. ವೆಚ್ಚದಲ್ಲಿ ನೂತನ ಪಶು ವೈದ್ಯಕೀಯ ಚಿಕಿತ್ಸಾಲಯದ ಕಟ್ಟಡ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಶಾಸಕ ರನಮೇಶ ಬಂಡಿಸಿದ್ದೇಗೌಡ ಭೂಮಿಪೂಜೆ ನೆರವೇರಿಸಿದರು. ಸವಿತಾ ರವಿಕುಮಾರ್, ಶಿವಲಿಂಗಯ್ಯ, ಪ್ರವೀಣ್‌ಕುಮಾರ್, ಬಿ.ವಿ.ಸುರೇಶ್, ರವಿಕುಮಾರ್, ಪುಟ್ಟರಾಜು, ಪ್ರದೀಪ್ ಇತರರಿದ್ದರು. 
ಮಂಡ್ಯ

ನಾನೂ ಸಚಿವ ಸ್ಥಾನದ ಆಕಾಂಕ್ಷಿ

ಎಂ.ರವಿ
ಕೆ.ಆರ್.ಸಾಗರ: ನಾನೂ ಸಚಿವ ಸ್ಥಾನದ ಅಕ್ಷಾಕ್ಷಿಯಾಗಿದ್ದೇನೆ. ನನಗೂ ಸಚಿವನಾಗಬೇಕೆಂಬ ಆಸೆ ಇದೆ. ಸಂಪುಟದ ಮರು ಬದಲಾವಣೆ ಸಂದರ್ಭದಲ್ಲಿ ನನಗೆ ಸಚಿವ ಸ್ಥಾನ ಸಿಗಲಿದೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗೊಳ ಗ್ರಾಮದಲ್ಲಿ ಸುಮಾರು 48.34 ಲಕ್ಷ ರೂ. ವೆಚ್ಚದಲ್ಲಿ ನೂತನ ಪಶು ವೈದ್ಯಕೀಯ ಚಿಕಿತ್ಸಾಲಯದ ಕಟ್ಟಡ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಪಕ್ಷದ ನಿಷ್ಠಾವಂತ ಶಾಸಕನಾಗಿದ್ದೇನೆ. ಹೈಕಮಾಂಡ್ ಆದೇಶ ಪಾಲನೆ ಮಾಡುತ್ತೇನೆ. ನವೆಂಬರ್‌ನಲ್ಲಿ ಯಾವುದೇ ಕ್ರಾಂತಿ ಆಗುವುದಿಲ್ಲ ಎಂದು ಹೇಳಿದರು. 
ಗ್ರಾಪಂ ಅಧ್ಯಕ್ಷೆ ಸವಿತಾ ರವಿಕುಮಾರ್, ಜಿಲ್ಲಾ ಪಶು ಇಲಾಖೆ ಉಪ ನಿರ್ದೇಶಕ ಶಿವಲಿಂಗಯ್ಯ, ತಾಲೂಕು ಪಶು ಇಲಾಖೆ ಉಪನಿರ್ದೇಶಕ ಪ್ರವೀಣ್‌ಕುಮಾರ್, ಗ್ರಾಪಂ ಮಾಜಿ ಆಧ್ಯಕ್ಷರಾದ ಬಿ.ವಿ.ಸುರೇಶ್, ರವಿಕುಮಾರ್, ಪುಟ್ಟರಾಜು, ಬೆಳಗೊಳ ಪಶು ವೈದ್ಯಕೀಯ ಆಸ್ಪತ್ರೆ ವೈದ್ಯ ಪ್ರದೀಪ್, ಗ್ರಾಪಂ ಸದಸ್ಯರಾದ ಅರವಿಂದ, ರಜಿನಿ, ಮಂಜು, ಗ್ರಾಮದ ಯಜಮಾನ ಬಿ.ಎಂ.ಸ್ವಾಮಿಗೌಡ, ರವಿ, ಮುಖಂಡ ರವೀಶ್ ಉಪಸ್ಥಿತರಿದ್ದರು.