ಅಪಘಾತದಲ್ಲಿ ಮೃತಪಟ್ಟ ಅರುಣ್ (19)
- ಬಸ್ತಿಪುರ ಚೆಕ್ ಪೋಸ್ಟ್
- ಬೈಕ್‌ನಿಂದ ಆಯತಪ್ಪಿ ಬಿದ್ದು ಗಾಯ
ಕೆ.ಆರ್.ಸಾಗರ: ಬಸ್ತಿಪುರ ಚೆಕ್ ಪೋಸ್ಟ್ ಬಳಿ ಗುರುವಾರ ಸಂಜೆ ಬೈಕ್‌ನಿಂದ ಆಯತಪ್ಪಿ ಬಿದ್ದು ಗಾಯಗೊಂಡಿದ್ದ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
ಮೈಸೂರು ಜಿಲ್ಲೆ ಬಿಳಕೆರೆ ಸಮೀಪದ ಗಾಗೇನಹಳ್ಳಿ ನಿವಾಸಿ ಸಿದ್ದರಾಜು ಅವರ ಮಗ ಅರುಣ್ (19) ಮೃತಪಟ್ಟವ.
ಎಲ್ ಆ್ಯಂಟ್ ಟಿ ಕಂಪನಿಯಲ್ಲಿ ಗುತ್ತಿಗೆ ನೌಕರನಾಗಿದ್ದ ಅರುಣ್ ಸ್ನೇಹಿತರೊಂದಿಗೆ ಬಲಮುರಿಗೆ ಬಂದು ಕೂರ್ಗಹಳ್ಳಿ ಗ್ರಾಮಕ್ಕೆ ಹಿಂದಿರುಗುತ್ತಿದ್ದ.
ಈ ವೇಳೆ ಚೆಕ್ ಪೊಸ್ಟ್ ಬಳಿ ಬಿದ್ದಿದ್ದ ಸಣ್ಣಕಲ್ಲುಗಳ ರಾಶಿಯಿಂದ ಬೈಕ್ ಸ್ಕಿಡ್ ಆಗಿದ್ದು, ಸವಾರ ಸಂಜಯ್ ಹಾಗೂ ಹಿಂಬದಲ್ಲಿಯಲ್ಲಿದ್ದ ಈತ ಕೆಳಗೆ ಬಿದ್ದಿದ್ದಾರೆ. ಸಂಜಯ್‌ಗೆ ಸಣ್ಣಪುಟ್ಟ ಗಾಯವಾಗಿದ್ದು, ಅರುಣ್ ತಲೆಗೆ ಪೆಟ್ಟು ಬಿದ್ದ ಪರಿಣಾಮ ಆತನನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.