ಹಲಗೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಪತ್ರ ವಿತರಿಸಲಾಯಿತು. ಡಾ.ಟಿ.ಶ್ರೀನಿವಾಸ್, ಪ್ರಾಂಶುಪಾಲ ಆಲಂಗೂರ್ ಮಂಜುನಾಥ್, ತಾರಾ ಜಯಲಕ್ಷ್ಮೀ, ಗುರುಪ್ರಸಾದ್, ಕುಮಾರಸ್ವಾಮಿ, ಸುಧಾಬಿದರಿ, ಮಧು ಕುಮಾರ್, ರಂಜನ್, ಪ್ರಶಾಂತ್ , ರಮ್ಯಾ, ಚೇತನ,ಶಾಲಿನಿ, ಭವ್ಯಾ, ಮೂರ್ತಿ ಇತರರು ಇದ್ದರು. 
ಮಂಡ್ಯ

ವಿದ್ಯಾರ್ಥಿ ಜೀವನ ಸಾರ್ಥಕ ಪಡಿಸಿಕೊಳ್ಳಿ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ ವಿಭಾಗದ ಸಂಚಾಲಕ ಡಾ.ಟಿ.ಶ್ರೀನಿವಾಸ್ ಸಲಹೆ
ಹಲಗೂರು: ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ವ್ಯಾಸಂಗಕ್ಕೆ ಹೆಚ್ಚು ಆದ್ಯತೆ ನೀಡಿ ಗುರಿ ತಲುಪಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ ವಿಭಾಗದ ಸಂಚಾಲಕ ಡಾ.ಟಿ.ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಘಟಿಕೋತ್ಸವ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾವು ವಿದ್ಯೆ ಕಲಿತು ಜೀವನ ರೂಪಿಸಿಕೊಂಡ ಮೇಲೆ ಬಡವರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಿದರೆ ಹುಟ್ಟಿದಕ್ಕೂ ಸಾರ್ಥಕವಾಗುತ್ತದೆ. ಯಾವುದೇ ಉನ್ನತ ಪದವಿಯಲ್ಲಿದ್ದರೂ ನಮ್ಮ ಪಾಲಕರಿಗೆ ನಾವು ಮಕ್ಕಳೇ, ಅವರಿಂದ ಪಡೆದ ಪ್ರೀತಿ ವಾತ್ಸಲ್ಯ ಮರೆಯದೆ ಅವರಿಗೆ ಸಲ್ಲಬೇಕಾದ ಗೌರವ ಕೊಡಬೇಕು ಎಂದರು.
ಸಮಾರಂಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಸೀಮಾ ಕೌಸರ್ ಮಾತನಾಡಿ, ಶಾಲಾ- ಕಾಲೇಜುಗಳಲ್ಲಿ ನೀಡುವ ಪದವಿ ಪತ್ರ ನಮ್ಮ ಶೈಕ್ಷಣಿಕ ಜೀವನದ ಒಂದು ಮಹತ್ತರವಾದ ಘಟ್ಟ. ಪ್ರತಿಯೊಬ್ಬ ವಿದ್ಯಾರ್ಥಿಯು ಶ್ರಮಿಸಿ ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಉನ್ನತ ಹುದ್ದೆಗೇರಬೇಕು ಎಂದರು.
ಪ್ರಾಂಶುಪಾಲ ಆಲಂಗೂರ್ ಮಂಜುನಾಥ್, ತಾರಾ ಜಯಲಕ್ಷ್ಮೀ, ಗುರುಪ್ರಸಾದ್, ಕುಮಾರಸ್ವಾಮಿ, ಸುಧಾಬಿದರಿ, ಮಧು ಕುಮಾರ್, ರಂಜನ್, ಪ್ರಶಾಂತ್, ರಮ್ಯಾ, ಚೇತನ,ಶಾಲಿನಿ, ಭವ್ಯಾ, ಮೂರ್ತಿ ಇತರರು ಇದ್ದರು.