ಮಂಡ್ಯ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಡಿ.ಸಿ.ಮಹೇಂದ್ರ ಅವರನ್ನು ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಅಹಿಂದ ಸಂರಕ್ಷಣಾ ವೇದಿಕೆಯ ವತಿಯಿಂದ ಅಭಿನಂದಿಸಲಾಯಿತು. ಕೆ.ಟಿ.ಶಿವಕುಮಾರ್, ಆಶಿಷ್ ಪಾಷಾ, ಲೋಕೇಶ್, ಪಿ.ಶಶಿಕುಮಾರ್, ರಾಚಯ್ಯ ಇದ್ದರು.
- ಅಹಿಂದ ಸಂರಕ್ಷಣಾ ವೇದಿಕೆಯ ನಿರ್ದೇಶಕ ಕೆ.ಟಿ.ಶಿವಕುಮಾರ್ ಪ್ರಶಂಸೆ
ಮದ್ದೂರು: ಮಂಡ್ಯ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಡಿ.ಸಿ.ಮಹೇಂದ್ರ ಅವರನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಅಹಿಂದ ಸಂರಕ್ಷಣಾ ವೇದಿಕೆಯ ವತಿಯಿಂದ ಅಭಿನಂದಿಸಲಾಯಿತು.
ಅಹಿಂದ ಸಂರಕ್ಷಣಾ ವೇದಿಕೆಯ ನಿರ್ದೇಶಕ ಕೆ.ಟಿ.ಶಿವಕುಮಾರ್ ಡಿ.ಸಿ.ಮಹೇಂದ್ರ ಅವರನ್ನು ಅಭಿನಂದಿಸಿ ಮಾತನಾಡಿ, ತಾಲೂಕಿನ ಅಹಿಂದ ಸಂರಕ್ಷಣಾ ವೇದಿಕೆಯ ಸಹ ಕಾರ್ಯದರ್ಶಿಯಾಗಿ ಇನ್ನೂ ಹಲವಾರು ಸಂಘಟನೆಗಳಲ್ಲಿ ಸೇವೆ ಸಲ್ಲಿಸುವ ಜತೆಗೆ ಈಗ ಮಂಡ್ಯ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿರುವುದು ಹೆಮ್ಮೆ ಪಡುವ ವಿಚಾರವಾಗಿದೆ ಎಂದರು.
ಮಹೇಂದ್ರ ಅವರು ತಂದೆ ಚಿಕ್ಕಣ್ಣ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ, ರೋಗಿಗಳಿಗೆ ಹಣ್ಣು ವಿತರಣೆ, ಸಸಿಗಳ ವಿತರಣೆ ಹೀಗೆ ಹಲವಾರು ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಅಹಿಂದ ಸಂರಕ್ಷಣಾ ವೇದಿಕೆಯ ಸಂಚಾಲಕ ಆಶಿಷ್ ಪಾಷಾ, ಅಹಿಂದ ಚಳವಳಿ ಸಂಘಟನೆಯ ರಾಜ್ಯ ಸಂಚಾಲಕ ಲೋಕೇಶ್, ಅಹಿಂದ ಸಂರಕ್ಷಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಪಿ.ಶಶಿ ಕುಮಾರ್, ಮುಖಂಡರಾದ ರಾಚಯ್ಯ, ಪುಟ್ಟಲಿಂಯ್ಯ, ಮಹದೇವಯ್ಯ, ಮಂಡ್ಯ ಜಿಲ್ಲಾ ಗುತ್ತಿಗೆದಾರರ ಕಾರ್ಯದರ್ಶಿ ಶಾಂತಕುಮಾರ್, ಪ್ರೊ. ಅಭಿಲಾಷ್, ಸಿ.ವೈ.ನಿತ್ಯಾನಂದ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಗುಡಿಗೆರೆ ಬಸವರಾಜು, ಡಿ.ಎ.ಕೆರೆ ಚಿಕ್ಕಣ್ಣ ಇದ್ದರು.