ಮದ್ದೂರು ನಗರದ ತಾಲೂಕು ಕಚೇರಿಯಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು. ಪರಶುರಾಮ್ ಸತ್ತಿಗೇರಿ, ಬಿ.ನಾಗರಾಜು, ಶಂಕರ್, ಅಂದಾನಿ, ರಾಜೇಶ್, ರಮೇಶ್, ಗಂಗಯ್ಯ ಇದ್ದರು. 
ಮಂಡ್ಯ

ಸಮಬಾಳು ಒದಗಿಸಲು ಹೋರಾಡಿದ್ದ ಮಡಿವಾಳ ಮಾಚಿದೇವರು

ಪ್ರಮುಖ ಮುಖ್ಯಾಂಶಗಳು

  • ಮಡಿವಾಳ ಮಾಚಿದೇವರು
  • ಸರ್ವರಿಗೂ ಸಮಪಾಲು -ಸಮಬಾ
  • ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ
ಮದ್ದೂರು: ಮಡಿವಾಳ ಮಾಚಿದೇವರು 12ನೇ ಶತಮಾನದಲ್ಲಿ ಸರ್ವರಿಗೂ ಸಮಪಾಲು -ಸಮಬಾಳು ಒದಗಿಸಲು ನಿರಂತರ ಹೋರಾಟ ಮಾಡಿದ ಮಹಾನ್ ವ್ಯಕ್ತಿ ಎಂದು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಬಣ್ಣಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದುರ್ಬಲರ ಶೋಷಣೆ, ಜಾತೀಯತೆ, ಮೇಲು, ಕೀಳು, ತಾರತಮ್ಯ, ಮೂಢನಂಬಿಕೆಗಳ ಸೃಷ್ಟಿ, ಶಿಕ್ಷಣದಲ್ಲಿ ಅವಕಾಶ ವಂಚನೆ. ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇವೆಲ್ಲದರಿಂದ ಮಹಿಳೆಯರು, ವೃತ್ತಿ ನಿರತ ಶ್ರಮಜೀವಿಗಳು, ಬಡವರು, ದೀನ ದಲಿತರು ಹತಾಶೆಗೊಂಡು ಅಸಹನೀಯ ಬದುಕು ನಡೆಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ಧೈರ್ಯ ತುಂಬಿ ಸಮಾನತೆಗಾಗಿ ಹೋರಾಟ ಮಾಡಿದ ಅವತಾರ ಪುರಷ ಎಂದು ಪ್ರಶಂಸಿಸಿದರು.
ಶಿರಸ್ತೇದಾರ್ ಲಕ್ಷ್ಮೀನರಸಿಂಹ, ವೀರ ಮಡಿವಾಳ ಮಾಚಯ್ಯ ದೇವ ಸಂಘದ ಅಧ್ಯಕ್ಷ ಬಿ.ನಾಗರಾಜು, ಉಪಾಧ್ಯಕ್ಷ ಶಂಕರ್, ಸದಸ್ಯರಾದ ಶಂಕರ್, ಅಂದಾನಿ, ರಾಜೇಶ್, ರಮೇಶ್, ಗಂಗಯ್ಯ, ಮಹೇಶ್ ಇತರರಿದ್ದರು.