ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು. ಕೆ.ಟಿ.ಶಿವಕುಮಾರ್, ಶಿವಣ್ಣ, ಬಸವರಾಜು, ಪುಟ್ಟಲಿಂಗಯ್ಯ, ಶ್ರೀನಿವಾಸಶೆಟ್ಟಿ, ಪಿ.ಶಶಿಕುಮಾರ್ ಇದ್ದರು.
- ದಲಿತ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆ.ಟಿ.ಶಿವಕುಮಾರ್ ಅಭಿಮತ
ಮದ್ದೂರು: ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು.
ದಲಿತ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ಮಡಿವಾಳ ಮಾಚಿದೇವ ಶರಣರು 12ನೇ ಶತಮಾನದ ವೇಳೆ ಸಮಾಜದಲ್ಲಿ ನಡೆಯುತ್ತಿದ್ದ ಅಸ್ಪಶ್ಯತೆ, ಮೇಲು-ಕೀಳು, ಅಸಮಾನತೆ ವಿರುದ್ಧ ಹೋರಾಡಿದ ಮಹಾ ಪುರುಷ ಎಂದು ಬಣ್ಣಿಸಿದರು. ಶೋಷಿತ ಸಮುದಾಯಗಳಿಗೆ ಶಿಕ್ಷಣ, ಸಮಾನತೆ ನೀಡಲು ನಿರಂತರ ಹೋರಾಟ ಮಾಡಿದ ಧೀಮಂತ ವ್ಯಕ್ತಿ ಎಂದು ಪ್ರಶಂಸಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಶಿವಣ್ಣ ಮಾತನಾಡಿ, ದಮನಿತರ ಪರವಾಗಿ ಮಡಿಮಾಳ ಮಾಚಿದೇವರ ಹೋರಾಟ ನಿಜಕ್ಕೂ ಶ್ಲಾಘನೀಯವಾಗಿದ್ದು, ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ದಲಿತ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಕಾರ್ಕಳ್ಳಿ ಬಸವರಾಜು, ಸಹ ಕಾರ್ಯದರ್ಶಿಗಳಾದ ರಾಚಯ್ಯ, ತೂಬಿನಕರೆ ರಮೇಶ್, ಕೆ.ಜೆ.ಗೋವಿಂದರಾಜ್, ಬೂದಗೂಪ್ಪೆ ಪುಟ್ಟಲಿಂಗಯ್ಯ ಅಹಿಂದ ಸಂರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪಿ.ಶಶಿಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿ ದಾಕ್ಷಾಯಿಣಿ ವೆಂಕಟೇಶ್, ಶಿಕ್ಷಕ ರಮೇಶ್, ಮುಖಂಡರಾದ ಜಯರಾಮು, ಮೋಹನ್, ಶ್ರೀನಿವಾಸ, ರಾಮಕೃಷ್ಣ, ನಂಜುಂಡೇಗೌಡ, ಗಂಗರಾಜ್, ಮಹಮದ್‌ಗೌಸ್, ನಟರಾಜ್, ಪುರುಷೋತ್ತಮ ಇತರರಿದ್ದರು.