ಮಳವಳ್ಳಿ ತಾಲೂಕಿನ ಉಪ್ಪನಹಳ್ಳಿ (ಕನ್ನಳ್ಳಿ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಅಕ್ಕಮ್ಮನಕೊಪ್ಪಲು ಎಂ.ರವಿ ಅವರನ್ನು ಆಡಳಿತ ಮಂಡಳಿ ನಿರ್ದೇಶಕರು ಅಭಿನಂದಿಸಿದರು. ಮುಖಂಡರಾದ ಆರ್.ಎನ್.ವಿಶ್ವಾಸ್, ರಾಜೇಂದ್ರ, ಶಿವಸ್ವಾಮಿ, ಎಂ.ಸಿ.ಚಂದ್ರಶೇಖರ್, ಪ್ರಭು, ಶಿವಣ್ಣ, ಪರಶಿವಮೂರ್ತಿ, ಮರಿಮಾದಪ್ಪ ಇದ್ದರು. 
ಮಂಡ್ಯ

ಉಪ್ಪನಹಳ್ಳಿ ಸಹಕಾರ ಸಂಘಕ್ಕೆ ಎಂ.ರವಿ ಅಧ್ಯಕ್ಷ

ಮಳವಳ್ಳಿ: ತಾಲೂಕಿನ ಉಪ್ಪನಹಳ್ಳಿ(ಕನ್ನಳ್ಳಿ) ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅಕ್ಕಮ್ಮನಕೊಪ್ಪಲು ಎಂ.ರವಿ ಅವಿರೋಧವಾಗಿ ಆಯ್ಕೆಯಾದರು.
ಸತೀಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಎಂ.ರವಿ ಒಬ್ಬರೆ ಉಮೇದುವಾರಿಕೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಸಂಘದ ಕಾರ್ಯದರ್ಶಿ ನಂಜುಂಡಸ್ವಾಮಿ ಘೋಷಣೆ ಮಾಡಿದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಸಿದ್ದರಾಜು ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರು ಹಾಜರಿದ್ದರು.
ನೂತನ ಅಧ್ಯಕ್ಷ ಎಂ.ರವಿ ಅವರನ್ನು ಸಂಘದ ನಿರ್ದೇಶಕರು ಹಾಗೂ ಬೆಂಬಲಿಗರು ಅಭಿನಂದಿಸಿದರು. ಇದೇ ವೇಳೆ ಮನ್‌ಮುಲ್ ನಿರ್ದೇಶಕ ಆರ್.ಎಂ.ವಿಶ್ವಾಸ್, ಸುಜ್ಜಲೂರು ಸೊಸೈಟಿ ಅಧ್ಯಕ್ಷ ರಾಜೇಂದ್ರ, ಬಂಡೂರು ಗ್ರಾಪಂ ಮಾಜಿ ಅಧ್ಯಕ್ಷ ಶಿವಸ್ವಾಮಿ, ರಾಗಿಬೊಮ್ಮನನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಪ್ರಭು, ಶೆಟ್ಟಹಳ್ಳಿ ಗ್ರಾಪಂ ಮಾಜಿ ಸದಸ್ಯ ಮೂಗಿನಕೊಪ್ಪಲು ಎಂ.ಸಿ.ಚಂದ್ರಶೇಖರ್, ಮುಖಂಡರಾದ ಗೂಡಿನ ಶಿವಣ್ಣ, ಪರಶಿವಮೂರ್ತಿ, ಮರಿಮಾದಪ್ಪ, , ಚಿಕ್ಕಣ್ಣ, ಆನಂದರಾಜು, ಮರಿಗೌಡ, ಸಿದ್ದರಾಜು, ಮಂಜುನಾಥ ಇದ್ದರು