ಮಂಡ್ಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಎಲ್.ರಾಜಶೇಖರ್ ಉದ್ಘಾಟಿಸಿದರು.  
ಮಂಡ್ಯ

ಅಗತ್ಯವಿದ್ದವರಿಗೆ ಲಯನ್ಸ್ ಸಂಸ್ಥೆ ಸೇವೆ: ಜಿಲ್ಲಾ ಪ್ರಾಂತಪಾಲ ಕೆ.ಎಲ್.ರಾಜಶೇಖರ್ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಪ್ರಾಂತಪಾಲರ ಅಧಿಕೃತ ಭೇಟಿ ಮತ್ತು ಸೇವಾಕಾರ್ಯ ಸಮರ್ಪಣೆ ಕಾರ್ಯಕ್ರಮ
  • ಕುವೆಂಪುನಗರದಲ್ಲಿರುವ ಲಯನ್ಸ್ ಸರ್ವೀಸಸ್ ಫೌಂಡೇಷನ್ ಸಭಾಂಗಣದಲ್ಲಿ ಆಯೋಜನೆ
ಮಂಡ್ಯ: ಅಗತ್ಯಯುಳ್ಳವರಿಗೆ ಆರೋಗ್ಯ ಮತ್ತು ಆರ್ಥಿಕ ಸಬಲೀಕರಣಗೊಳಿಸುವುದೇ ಲಯನ್ಸ್ ಸಂಸ್ಥೆಯ ಮುಖ್ಯಧ್ಯೇಯ ಎಂದು ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಎಲ್.ರಾಜಶೇಖರ್ ಹೇಳಿದರು.
ಇಲ್ಲಿನ ಕುವೆಂಪುನಗರದಲ್ಲಿರುವ ಲಯನ್ಸ್ ಸರ್ವೀಸಸ್ ಫೌಂಡೇಷನ್ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ ಮಂಡ್ಯ, ಶುಗರ್ ಲಯನ್ಸ್ ಸಂಸ್ಥೆ, ಲಯನ್ಸ್ ಸಂಸ್ಥೆ ಆಫ್ ಮಂಡ್ಯ ಸೆಂಟಿನ್ಯೂಯಲ್ನಿಂದ ಆಯೋಜಿಸಿದ್ದ ಜಿಲ್ಲಾ ಪ್ರಾಂತಪಾಲರ ಅಧಿಕೃತ ಭೇಟಿ ಮತ್ತು ಸೇವಾಕಾರ್ಯ ಸಮರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಪಂಚದಲ್ಲಿ ಲಯನ್ಸ್ ಬಹುದೊಡ ಸೇವಾ ಸಂಸ್ಥೆಗಳಲ್ಲಿ ಒಂದಾಗಿದೆ. ದೇಶ-ವಿದೇಶದಲ್ಲಿ ಅಗತ್ಯಯುಳ್ಳವರಿಗೆ ಸಂಸ್ಥೆಯ ಸದಸ್ಯರು ಮತ್ತು ತಂಡಗಳು ತಮ್ಮದೇ ಆದ ಕೊಡುಗೆ ನೀಡಿ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ 25 ವರ್ಷದಿಂದ ಪರಿಸರ ರಕ್ಷಣೆ, ಆರೋಗ್ಯ ಶಿಬಿರ, ವಿದ್ಯಾರ್ಥಿ ಹಾಗೂ ರೋಗಿಗಳಿಗೆ ಆರ್ಥಿಕ ನೆರವು, ಉದ್ಯೋಗ-ಉದ್ಯಮಶೀಲತಾ ಕೌಶಲ ತರಬೇತಿ ನೀಡುತ್ತಿದೆ. ಸರ್ಕಾರಿ ಶಾಲೆ ಪುನಶ್ಚೇತನಕ್ಕೆ ನೆರವು ನೀರು, ಪರಿಕರಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಮಾಜಿ ಪ್ರಾಂತಪಾಲ ಡಾ.ಜಿ.ಎ.ರಮೇಶ್, ಅಧ್ಯಕ್ಷ ಕೆ.ಎಸ್.ಪ್ರೇಮಾನಂದಸಾಗರ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಟಿ.ಎಚ್.ವೆಂಕಟೇಶ್, ಖಜಾಂಚಿ ಕೆ.ಎಸ್.ಸುನೀಲ್, ಮೀನಾ ಆನಂದ್, ಎ.ಶೇಖರ್, ಎಂ.ಎನ್.ನಿತ್ಯಾನಂದ, ಪ್ರತಿಮಾ ರಮೇಶ್, ಬಿ.ಸಿ.ರಂಜಿತ್, ಕೃಪಾಶ್ರೀ ಇತರರಿದ್ದರು.