ಕೆ.ಎಂ.ದೊಡ್ಡಿಯ ಸರಾ(ಸ್ವರೂಪ್) ಫಾರಂ ಹೌಸ್‌ನಲ್ಲಿ ಮದ್ದೂರು ಕದಂಬ ಲಯನ್ಸ್ ಸಂಸ್ಥೆ, ಮಂಡ್ಯ ಲಯನ್ಸ್ ಸಂಸ್ಥೆ ಪ್ರಯೋಜಕತ್ವದಲ್ಲಿ ಭಾರತೀನಗರ ಸ್ಪೂರ್ತಿ ಲಯನ್ಸ್ ಸಂಸ್ಥೆ ಉದ್ಘಾಟನೆ ಮತ್ತು ಸನ್ನದು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾರತೀ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಎಂ. ಮಾಯಪ್ಪ ದಂಪತಿ ಅಭಿನಂದಿಸಲಾಯಿತು. ಕೆ.ಎಲ್. ರಾಜಶೇಖರ್, ಡಾ.ಎಲ್. ಕೃಷ್ಣೇಗೌಡ, ಟಿ.ಎಚ್. ವೆಂಕಟೇಶ್, ಕೆ.ಎಸ್. ಸುನೀಲ್ ಕುಮಾರ್ ಇತರರಿದ್ದರು. 
ಮಂಡ್ಯ

ದುರ್ಬಲ ವರ್ಗದವರಿಗೆ ಆಸರೆಯಾಗಿದೆ ಲಯನ್ಸ್

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಪ್ರಾಂತಪಾಲ ಕೆ.ಎಲ್. ರಾಜಶೇಖರ್ ಬಣ್ಣನೆ
  • ಸನ್ನದು ಪತ್ರ ವಿತರಣಾ ಕಾರ್ಯಕ್ರಮ
ಕೆ.ಎಂ.ದೊಡ್ಡಿ : ಬಡವರ ಸೇವೆ ಮಾಡಿ ಅವರಿಗೆ ನೆರವಾಗುವುದು ಲಯನ್ಸ್ ಸಂಸ್ಥೆಯ ಉದ್ದೇಶ ಎಂದು ಮಂಡ್ಯ ಲಯನ್ಸ್ ಸಂಸ್ಥೆಯ ಜಿಲ್ಲಾ ಪ್ರಾಂತಪಾಲ ಕೆ.ಎಲ್. ರಾಜಶೇಖರ್ ತಿಳಿಸಿದರು.
ಇಲ್ಲಿನ ಸರಾ(ಸ್ವರೂಪ್) ಫಾರಂ ಹೌಸ್‌ನಲ್ಲಿ ಬುಧವಾರ ಮದ್ದೂರು ಕದಂಬ ಲಯನ್ಸ್ ಸಂಸ್ಥೆ, ಮಂಡ್ಯ ಲಯನ್ಸ್ ಸಂಸ್ಥೆ ಪ್ರಯೋಜಕತ್ವದಲ್ಲಿ ಭಾರತೀನಗರ ಸ್ಪೂರ್ತಿ ಲಯನ್ಸ್ ಸಂಸ್ಥೆ ಉದ್ಘಾಟನೆ ಮತ್ತು ಸನ್ನದು ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೇವಾ ಮನೋಭಾವದಿಂದ ಆರಂಭವಾದ ಲಯನ್ಸ್ ಸಂಸ್ಥೆ ಪ್ರಪಂಚದ ಅತ್ಯುನ್ನತ ಸಂಸ್ಥೆಯಾಗಿ ಹೊರ ಹೊಮ್ಮಿ ಸಾಮಾಜಿಕ ಕಾರ್ಯ, ಸಾಧನೆ ಮಾಡುತ್ತ ದುರ್ಬಲ ವರ್ಗದವರಿಗೆ ಆಸರೆಯಾಗಿ ಕಾರ್ಯ ನಿರ್ವಹಿಸುತ್ತ ಜನಾನುರಾಗಿಯಾಗಿದೆ. ಲಯನ್ಸ್ ಸಂಸ್ಥೆಗೆ ಸೇವಾ ಮನೋಭಾವದಿಂದ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ನೂತನ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧನೆ ಮಾಡಿದ ನಿಕಟ ಪೂರ್ವ ಮಲ್ಟಿ ಕೌನ್ಸಿಲ್ ಛೇರ್ಮನ್ ಡಾ.ಎಲ್. ಕೃಷ್ಣೇಗೌಡ ಮಾತನಾಡಿ, ಹಣವಂತರೆಲ್ಲ ಸೇವೆ ಮಾಡಲು ಸಾಧ್ಯವಿಲ್ಲ, ನಾವು ಸಂಪಾದನೆ ಮಾಡಿದ ಒಂದು ಭಾಗವನ್ನು ಸೇವೆಗಾಗಿ ಮುಡಿಪಾಗಿ ಇಡಬೇಕು, ಎಲ್ಲರಿಗೂ ಸೇವೆ ಮಾಡುವ ಭಾಗ್ಯ ಸಿಗುವುದಿಲ್ಲ. ಲಯನ್ಸ್  ಸಂಸ್ಥೆ ಸೇವೆ ಮಾಡುವ ಅವಕಾಶ ಕಲ್ಪಿಸಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಬಡವರು, ಸರಕಾರಿ ಶಾಲಾ ಮಕ್ಕಳು, ನಿರ್ಗತಿಕರಿಗೆ ಸಹಾಯ ಹಸ್ತ ಚಾಚಬೇಕು. ನೀವು ಮಾಡುವ ಸಹಾಯ ಸಾರ್ಥಕತೆ ತಲುಪಬೇಕು ಆ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಸ್ಥೆಯನ್ನು ಬೆಳೆಸುವ ಮೂಲಕ ತಾವು ಸಹ ಮುಖ್ಯ ರಂಗಕ್ಕೆ ಬರಬೇಕು ಎಂದು ಆಶೀಸಿದರು. 
ಭಾರತೀ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಎಂ. ಮಾಯಪ್ಪ ದಂಪತಿ ಮತ್ತು ಕೃಷ್ಣೇಗೌಡ ದಂಪತಿಯನ್ನು ಸನ್ಮಾನಿಸಲಾಯಿತು. ಈ ವೇಳೆ ಅರ್ಹ ಬಡವರಿಗೆ ಕಂಬಳಿ ವಿತರಣೆ ಮಾಡಲಾಯಿತು. 
ಈ ವೇಳೆ ಅಧ್ಯಕ್ಷರಾಗಿ ಕೆ.ಪಿ. ದೊಡ್ಡಿ ಶಿವರಾಮು, ಉಪಾಧ್ಯಾಕ್ಷರಾಗಿ ಕರಡಕೆರೆ ಹನುಮಂತೇಗೌಡ, ಮಂಚಶೆಟ್ಟಿ, ಕಾರ್ಯದರ್ಶಿ  ಪ್ರೊ.ಬಿ.ಎಸ್. ಬೋರೇಗೌಡ, ಸಹ ಕಾರ್ಯದರ್ಶಿ ರಘುವೆಂಕಟೇಗೌಡ, ಖಜಾಂಚಿ ಪುಟ್ಟರಾಮರಾಜೇಅರಸ್, ಅಣ್ಣೂರು ಸಂದೀಪ್, ದೇವರಹಳ್ಳಿ ರಘು, ಅಣ್ಣೂರು ಶಿವರಾಮು, ಎ.ಬಿ. ಹಳ್ಳಿ ಪುಟ್ಟ, ಕರಡಕೆರೆ ಸುರೇಂದ್ರ ಪಧಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು.
ಲಯನ್ಸ್ ಸಂಸ್ಥೆಯ ಜಿಲ್ಲಾ ಸಂಪುಟ ಕಾರ್ಯದರ್ಶಿ ಟಿ.ಎಚ್. ವೆಂಕಟೇಶ್, ಜಿಲ್ಲಾ ಸಂಪುಟ ಖಜಾಂಚಿ ಕೆ.ಎಸ್. ಸುನೀಲ್ ಕುಮಾರ್, ಜಿಲ್ಲಾ ರಾಯಭಾರಿ ಕೆ.ಡಿ. ಕಾರ್ಯಪ್ಪ, ಜಿಲ್ಲಾ ಸಂಪುಟ ಸಂಯೋಜಕ ಎಂ.ವಿ. ನಂದೀಶ್, ಸಂಯೋಜಕ ಜಯಕುಮಾರ್, ವಿ.ಹರ್ಷ, ಜಿಲ್ಲಾಧ್ಯಕ್ಷ ಎಂ. ಸಿದ್ದೇಗೌಡ, ಸಿ.ಪಿ. ಆದರ್ಶ, ಗೌರವ ಕಾರ್ಯದರ್ಶಿಗಳಾದ ಕೆ.ಶೆಟ್ಟಹಳ್ಳಿ ನಾಗರಾಜು, ಶಿವಲಿಂಗಯ್ಯ  ಟಿ.ಎನ್. ಶಿವಲಿಂಗೇಗೌಡ, ಡಿ.ಎ.ಕೆರೆ ಚಿಕ್ಕಹುಚ್ಚೇಗೌಡ, ಬೊಮ್ಮನದೊಡ್ಡಿ ಬಸವರಾಜು, ಅಣ್ಣೂರು ದೇವರಾಜು, ಚಿಕ್ಕರಸಿನಕೆರೆ ಗಿರೀಶ್ ಸೇರಿದಂತೆ ಮತ್ತಿತರಿದ್ದರು.