ಮದ್ದೂರಿನ ಪ್ರವಾಸಿ ಮಂದಿರ ಬಳಿ ಮದ್ದೂರು ಉತ್ಸವದ ಅಂಗವಾಗಿ ವಿದ್ಯುತ್ ದೀಪಾಲಂಕಾರಕ್ಕೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ಡಾ.ಕುಮಾರ್, ರಾಧಿಕಾ, ಚಲುವರಾಜು, ಪಿ.ಸಂದರ್ಶ, ಹರೀಶ್‌ಬಾಬು, ಶ್ರೀನಿವಾಸ್, ಮಮತಾ, ಸಿದ್ದರಾಜು ಇದ್ದರು. 
ಮಂಡ್ಯ

ಮದ್ದೂರಿನಲ್ಲಿ ದೀಪಾಲಂಕಾರಕ್ಕೆ ಚಾಲನೆ

ಮದ್ದೂರು : ಮದ್ದೂರಮ್ಮನವರ ಜಾತ್ರಾ ಮಹೋತ್ಸವ, ಶ್ರೀ ನರಸಿಂಹಸ್ವಾಮಿ ಬ್ರಹ್ಮೋತ್ಸವದ ಹಾಗೂ ಮದ್ದೂರು ಉತ್ಸವ ಅಂಗವಾಗಿ ಮದ್ದೂರಿನಲ್ಲಿ ಮೈಸೂರು ಮಾದರಿಯಲ್ಲಿ ಝಗಮಗಿಸುವ ದೀಪಾಲಂಕಾರಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಶನಿವಾರ ಸಂಜೆ ನಗರದ ಪ್ರವಾಸಿ ಮಂದಿರ ಬಳಿ ವಿದ್ಯುತ್ ದೀಪಾಲಂಕಾರ ಉದ್ಘಾಟಿಸಿ ಅವರು ಮಾತನಾಡಿ, ಕಳೆದ ಬಾರಿಗಿಂತ ಈ ವರ್ಷ ಮದ್ದೂರಮ್ಮ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಮೆರಗು ನೀಡಲಾಗಿದೆ. ನಗರಸಭೆ ಹಾಗೂ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನಗರದಾದ್ಯಂತ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಇದರಿಂದ ಹಬ್ಬದ ಉತ್ಸಾಹ ಸಾರ್ವಜನಿಕರಲ್ಲಿ ಇಮ್ಮಡಿಗೊಂಡಿದೆ ಎಂದರು.
ಕಳೆದ ಬಾರಿ ಹಬ್ಬವನ್ನು ಅದ್ದೂರಿಯಾಗಿ ಮಾಡಲು ಸಮಯದ ಅಭಾವವಿತ್ತು. ಆದರೆ ಈ ಬಾರಿ ಮದ್ದೂರಿನ ಜನತೆಗೆ ದಸರಾ ಮಾದರಿಯ ಅನುಭವ ನೀಡಬೇಕೆಂಬ ಹಂಬಲದಿಂದ 8 ದಿನಗಳ ಕಾಲ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ಮುಂದಿನ ವರ್ಷದಿಂದ ಮತ್ತಷ್ಟು ಅದ್ದೂರಿಯಾಗಿ ಮಾಡಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ್, ನಗರಸಭಾ ಪೌರಾಯುಕ್ತೆ ಎಸ್.ಎನ್.ರಾಧಿಕಾ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ನಿರ್ದೇಶಕ ಪಿ.ಸಂದರ್ಶ, ಮುನ್ ಮುಲ್ ನಿರ್ದೇಶಕ ಹರೀಶ್ ಬಾಬು, ಗ್ರೇಡ್ 2 ತಹಸೀಲ್ದಾರ್ ಸೋಮಶೇಖರ್, ಸಿಪಿಐ ನವೀನ್ ಕುಮಾರ್, ನಗರಸಭಾ ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಮಾಜಿ ಸದಸ್ಯ ಸಿದ್ದರಾಜು, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾ, ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್, ಮುಖಂಡರಾದ ಎಂ.ಡಿ.ಮಹಾಲಿಂಗಯ್ಯ, ತಿಮ್ಮೇಗೌಡ, ಮಹದೇವಯ್ಯ, ರಾಜೇಂದ್ರ, ಅರುಣ್, ವಿಜಯ್ ಕುಮಾರ್ ಮತ್ತಿತರರು ಇದ್ದರು.