ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಯುವ ಸಮ್ಮೇಳನದ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು. ರಾಜ್ಯ ಆಹಾರ ಆಯೋಗ ಅಧ್ಯಕ್ಷ ಡಾ.ಎಚ್.ಕೃಷ್ಣ, ಆಯೋಜನಾ ಸಮಿತಿ ಅಧ್ಯಕ್ಷೆ ಡಾ.ಎಚ್.ಸಿ.ಸವಿತಾ, ಡಾ.ಟಿ.ಆರ್.ಜ್ಯೋತಿ, ಕಾರ್ಯದರ್ಶಿ ಡಾ.ಆರ್.ಮನೋಹರ್, ಡಾ.ಸಂಜಯ್‌ಕುಮಾರ್, ಡಾ.ಶಿಲ್ಪಾ, ಡಾ.ಮಹೇಂದ್ರ ಇತರರಿದ್ದರು. 
ಮಂಡ್ಯ

ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಾಗಲಿ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • technology
ಮಂಡ್ಯ: ಪ್ರಸ್ತುತ ದಿನಗಳಲ್ಲಿನ ಪ್ರಸೂತಿ ಮತ್ತು ಸ್ತ್ರೀರೋಗ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಾಗಲಿ ಎಂದು ರಾಜ್ಯ ಆಹಾರ ಆಯೋಗ ಅಧ್ಯಕ್ಷ ಡಾ.ಎಚ್.ಕೃಷ್ಣ ಅಭಿಪ್ರಾಯಪಟ್ಟರು.
ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್)ಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಸೊಸೈಟಿ, ಮಿಮ್ಸ್‌ನ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ (ಒಬಿಜಿ), ಆದಿಚುಂಚನಗಿರಿ ವಿಶ್ವವಿದ್ಯಾಲಯ, ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಬಿ.ಜಿ.ನಗರ ಸಹಯೋಗದೊಂದಿಗೆ ಆಯೋಜಿಸಿದ್ದ ಎರಡು ದಿನದ ಮಹಿಳಾ ಆರೋಗ್ಯ-ಸಮಾಜದ ಶಕ್ತಿ ಘೋಷವಾಕ್ಯದ 6ನೇ ಯುವ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಂಡ್ಯದಲ್ಲಿ ಪ್ರಥಮವಾಗಿ ನಡೆದ ರಾಜ್ಯ ಮಟ್ಟದ ಪ್ರಸೂತಿ ಮತ್ತು ಸ್ತ್ರೀರೋಗ ಸೊಸೈಟಿಯ ಯುವ ಸಮ್ಮೇಳನವು ಯಶಸ್ವಿಯಾಗಲು ಎಲ್ಲರ ಸಹಕಾರ ಮತ್ತು ಸಹಭಾಗಿತ್ವದ ಶ್ರಮ ಫಲ ನೀಡಿದೆ. ಮುಖ್ಯವಾಗಿ ವೈದ್ಯ ವಿದ್ಯಾರ್ಥಿಗಳು, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರಿಗೆ ಹೊಸ ವಿಚಾರಗಳು ತಿಳಿದುಕೊಂಡಂತಾಗಿವೆ ಎಂದು ಹೇಳಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಚನದಲ್ಲಿ ತಿಳಿಸಿದ ವಿಚಾರಗಳು ನಮ್ಮೆಲ್ಲ ವೈದ್ಯರಿಗೆ ನೀತಿ ಬೋಧನೆಯಾಗಿದೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ವೈದ್ಯ ಸೇವೆ ನೀಡಲು ಮುಂದಾಗುತ್ತೇವೆ. ವೈಜ್ಞಾನಿಕ ವರದಿಗಳ ಪ್ರಕಾರ ಹೆರಿಗೆ ವಿಭಾಗದಲ್ಲಿ ಎಐ ತಂತ್ರಜ್ಞಾನವು ಗರ್ಭಾವಸ್ಥೆಯಲ್ಲಿ ಎದುರಾಗಬಹುದಾದ ಪ್ರಿಕ್ಲಾಂಪ್ಸಿಯಾ ಅಂದರೆ ಅಧಿಕ ರಕ್ತದೊತ್ತಡ ಮತ್ತು ಅವಧಿಗೆ ಮುನ್ನ ಹೆರಿಗೆಯಾಗುವ ಅಪಾಯಗಳ ಮುನ್ಸೂಚನೆ ನೀಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಆಯೋಜನಾ ಸಮಿತಿ ಅಧ್ಯಕ್ಷೆ ಡಾ.ಎಚ್.ಸಿ.ಸವಿತಾ, ಡಾ.ಟಿ.ಆರ್.ಜ್ಯೋತಿ, ಕಾರ್ಯದರ್ಶಿ ಡಾ.ಆರ್.ಮನೋಹರ್, ಡಾ.ಸಂಜಯ್‌ಕುಮಾರ್, ಡಾ.ಶಿಲ್ಪಾ, ಡಾ.ಮಹೇಂದ್ರ, ಡಾ.ಕಾವ್ಯಾಶ್ರೀ, ಡಾ.ಶ್ರೀಕಲಾ, ಹಿರಿಯ ವೈದ್ಯರಾದ ಡಾ.ಬಿ.ಎನ್.ಪ್ರಭಾವತಿ, ಡಾ.ವಸುಮತಿ ರಾವ್, ಡಾ.ಉಮಾದೇವಿ, ಡಾ.ಶೋಭಾ. ಎನ್.ಗುಡಿ, ಡಾ.ರಾಜಶ್ರೀ ಇತರರಿದ್ದರು. ಇದೇ ಸಂದರ್ಭದಲ್ಲಿ ವೈದ್ಯರನ್ನು ಅಭಿನಂದಿಸಲಾಯಿತು. ಅಂತೆಯೇ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವೈದ್ಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.