ಮದ್ದೂರು ತಾಲೂಕಿನ ಎನ್.ಕೋಡಿಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶಾಸಕ ಕೆ.ಎಂ.ಉದಯ್ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಎಚ್.ಎಲ್.ಸತೀಶ್, ಕುಮಾರ್‌ಕೊಪ್ಪ, ಡಾ.ಜೆ.ಪ್ರಮೋದ್, ಚಲುವರಾಜು, ಕೆ.ಟಿ.ಶಿವಕುಮಾರ್, ರಾಜೇಂದ್ರ, ರಾಮಯ್ಯ ಇದ್ದರು. ಮದ್ದೂರು
ಮಂಡ್ಯ

ಅಂಬೇಡ್ಕರ್ ತೋರಿದ ಮಾರ್ಗದಲ್ಲಿ ಮುನ್ನಡೆಯೋಣ

ಶಾಸಕ ಕೆ.ಎಂ.ಉದಯ್ ಕರೆ

ಮದ್ದೂರು: ಶೋಷಿತ ವರ್ಗಗಳ ಧ್ವನಿಯಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ನಮ್ಮ ದೇಶಕ್ಕೆ ಉತ್ತಮ ಸಂವಿಧಾನ ನೀಡುವುದರ ಮೂಲಕ ಮಹಿಳೆಯರು ಮತ್ತು ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯ, ಸಮಾನತೆ ಕಲ್ಪಿಸಿಕೊಟ್ಟ ಮಹಾನ್ ಮಾನವತಾವಾದಿ ಎಂದು ಶಾಸಕ ಕೆ.ಎಂ.ಉದಯ್ ಬಣ್ಣಿಸಿದರು.

ತಾಲೂಕಿನ ಎನ್.ಕೋಡಿಹಳ್ಳಿ ಗ್ರಾಮದಲ್ಲಿ ಶ್ರೀ ಬೋರೇಶ್ವರ ಸೇವಾ ಟ್ರಸ್ಟ್, ಡಾ.ಅಂಬೇಡ್ಕರ್ ಯುವಕರ ಸಂಘದಿಂದ ಭಾನುವಾರ ಆಯೋಜಿಸಿದ್ದ ಡಾ.ಅಂಬೇಡ್ಕರ್ ಜಯಂತಿ, ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಅವರು ವಿಶ್ವದಲ್ಲೇ ಶ್ರೇಷ್ಠ ವ್ಯಕ್ತಿತ್ವ ಹೊಂದಿದವರು. ಅವರ ಆದರ್ಶಗಳನ್ನ ನಾವುಗಳೆಲ್ಲ ಜೀವನದಲ್ಲಿ ಅಳವಡಿಸಿಕೊಂಡು ಅವರ ದಾರಿಯಲ್ಲಿ ಸಾಗಿ, ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗುವ ಮೂಲಕ ಅಂಬೇಡ್ಕರ್ ಆಶಯಗಳನ್ನು ಈಡೇರಿಸಬೇಕಿದೆ ಎಂದು ಆಶಿಸಿದರು.

ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಸತೀಶ್ ಬಿಲ್ಡರ್ಸ್ ಮಾಲೀಕ ಎಚ್.ಎಲ್. ಸತೀಶ್, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಸಂಯಮ ಬೆಳೆಸಿಕೊಳ್ಳಬೇಕು. ಜತೆಗೆ ಓದುವ ವಯಸ್ಸಿನಲ್ಲಿ ನಿಷ್ಠೆಯಿಂದ ಸಮಯ ಸದ್ಬಳಕೆ ಮಾಡಿಕೊಂಡು ಕಠಿಣ ವ್ಯಾಸಂಗ ಮಾಡಿ ಉನ್ನತ ಸ್ಥಾನ ಮಾನ ಗಳಿಸುವ ಮೂಲಕ ಪಾಲಕರಿಗೆ ಹಾಗೂ ಶಿಕ್ಷಕರಿಗೆ ಕೀರ್ತಿ ತರಬೇಬೇಕು ಎಂದು ಹೇಳಿದರು.

ನಿವೃತ ನೌಕರರನ್ನು ಅಭಿನಂದಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕುಮಾರ್ ಕೊಪ್ಪ, ನೌಕರರು ತಾವು ಸಲ್ಲಿಸುವ ಸೇವೆಯಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆ ಅವಳಡಿಸಿಕೊಂಡರೆ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ವಿದ್ಯಾರ್ಥಿಗಳಾದ ಕೆ.ಎಸ್.ಮಧುಸೂದನ್, ಕೆ.ವಿ.ಯೋಗ ನಂದನ್, ಕೆ.ಎಸ್.ರೋಹನ್, ಕೆ.ಎಸ್.ಶಿವಮಾದು, ಕುಮಾರಿ, ಕೆ.ಎಲ್.ಯುಕ್ತ, ಕೆ.ಜೆ.ಸಿಂಧು, ನಂದನ್, ನಿವೃತ್ತ ನೌಕರರಾದ ಕೆ.ಬಿ.ರಾಮಕೃಷ್ಣಯ್ಯ, ಲಕ್ಷ್ಮಿ ಬೋರಯ್ಯ ಅವರನ್ನು ಗೌರವವಿಸಲಾಯಿತು.

ನಿವೃತ್ತ ಶಸ್ತ್ರ ಚಿಕಿತ್ಸಕ ಡಾ.ಜೆ.ಪ್ರಮೋದ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ರಾಜೇಂದ್ರ , ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹುರುಗಲವಾಡಿ ರಾಮಯ್ಯ, ತಾಲೂಕು ಅಧ್ಯಕ್ಷ ಕೆ.ಟಿ.ಶಿವಕುಮಾರ್, ಕೆಇಬಿ ನಾಗೇಶ್, ಹೊಸಕೆರೆ ಸುನಿಲ್, ಅಜ್ಜಳ್ಳಿ ಮನು, ಮುದಿಗೆರೆ ಕಿರಣ್, ಶಶಿಕುಮಾರ್, ಕೆ.ಜೆ.ಗೋವಿಂದ್ ರಾಜ್, ವೆಂಕಟೇಶ್, ಕೆ.ಟಿ.ನಾಗರಾಜ್, ಕೆ.ಟಿ.ಸತ್ಯ, ಕೆ.ಎಂ.ಸತೀಶ್, ವೈರಮುಡಿ, ರವಿ, ಕುಮಾರ್, ನಿಶಾಂತ್, ಕಿರಣ್‌ಕುಮಾರ್, ವಿಶ್ವನಾಥ್, ಮಧು, ಧನು ಇತರರು ಇದ್ದರು.