ಕಿಕ್ಕೇರಿ ಹೋಬಳಿಯ ಗೋವಿಂದನಹಳ್ಳಿ ಗ್ರಾಮದ ಪಂಚಲಿಂಗೇಶ್ವರ ದೇಗುಲ ಆವರಣದಲ್ಲಿ ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಶನಿವಾರ ಅವಿರತ ಪ್ರತಿಷ್ಠಾನ, ಇಸ್ರೇ ಕಂಪನಿ ಉಚಿತ ನೋಟ್ ಬುಕ್, ಪಠ್ಯ ಸಾಮಗ್ರಿ ವಿತರಿಸಲಾಯಿತು. ಗುರುಪ್ರಸಾದ್, ಸಂತೋಷ್, ಮಲ್ಲೇಶ್, ಇಸ್ರೇ ಕಂಪನಿಯ ಅರುಣ್, ಮಧುಸೂದನ್, ದೀಪಕ್, ದೀಪಾ, ನಿಶಾ, ವಿವಿಧ ಶಾಲಾ ಶಿಕ್ಷಕರು ಇದ್ದರು.
ಕಿಕ್ಕೇರಿ: ಓದುವ ಮಕ್ಕಳಿಗೆ ಆಟ ಪಾಠದ ಅಭಿರುಚಿ ಮೂಡಿಸಲು ಪೂರಕ ವಾತಾವರಣ ಸೃಷ್ಟಿಸಲು ಅವಿರತವಾಗಿ ಶ್ರಮಿಸಬೇಕಿದೆ ಎಂದು ಅವಿರತ ಪ್ರತಿಷ್ಠಾನದ ಗುರುಪ್ರಸಾದ್ ಅಭಿಪ್ರಾಯಪಟ್ಟರು.
ಹೋಬಳಿಯ ಗೋವಿಂದನಹಳ್ಳಿ ಗ್ರಾಮದಲ್ಲಿ ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಬೆಂಗಳೂರಿನ ಅವಿರತ ಪ್ರತಿಷ್ಠಾನ ಹಾಗೂ ***ಇಸ್ರೇ ಕಂಪನಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ನೋಟ್‌ಪುಸ್ತಕ, ಪಠ್ಯಪರಿಕರ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ಗಡಿನಾಡು ಪ್ರದೇಶದಿಂದ ರಾಜ್ಯಾದ್ಯಂತ ಸರ್ಕಾರಿ ಕನ್ನಡ ಶಾಲೆ ಮಕ್ಕಳಿಗೆ ಓದಲು ಪೂರಕವಾದ ಪಠ್ಯ ಸಾಮಗ್ರಿ ವಿತರಿಸಲಾಗುತ್ತಿದೆ ಎಂದರು.
ಕನ್ನಡ ಸರ್ಕಾರಿ ಶಾಲೆ ಉಳಿವಿಗೆ ಪಾಲಕರು ಮುಂದಾಗಬೇಕಿದೆ. ನಿಮ್ಮೂರ ನಿಮ್ಮ ಶಾಲೆ ಉಳಿಯಲು ನಮ್ಮ ಸಂಸ್ಥೆ ಸದಾ ಬದ್ಧವಿದೆ. ಮಕ್ಕಳಿಗೆ ಅಂಕದಷ್ಟೆ ಸಂಸ್ಕಾರ ಶಿಕ್ಷಣ ಮುಖ್ಯವಿದೆ. ಮೊಬೈಲ್ ತಲೆ ತಗ್ಗಿಸುವಂತೆ ಭವಿಷ್ಯದಲ್ಲಿ ಮಾಡಲಿದ್ದು, ತಲೆ ಎತ್ತಿ ಬದುಕಲು ಪುಸ್ತಕವನ್ನು ಮಸ್ತಕಕ್ಕೆ ತುಂಬಿಕೊಳ್ಳಿ. ಓದುವಾಗ ಕಷ್ಟದ ಬದುಕು ಕಾಡದಿರಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಎಂಬುದು ಸಂಸ್ಥೆ ಆಶಯವಾಗಿದೆ ಎಂದು ಹುರಿದುಂಬಿಸಿದರು.
ಬೆಡದಹಳ್ಳಿ, ಬೆಳ್ಳಿಬೆಟ್ಟ ಕಾವಲು ಸೇರಿದಂತೆ ದಬ್ಬೇಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಶಾಲೆಗಳಿಗೆ ಪಠ್ಯ ಪರಿಕರ ವಿತರಿಸಲಾಯಿತು.
ಸಂತೋಷ್, ಮಲ್ಲೇಶ್, ಇಸ್ರೇ ಕಂಪನಿಯ ಅರುಣ್, ಮಧುಸೂದನ್, ದೀಪಕ್, ಸತ್ಯಕುಮಾರ್, ಮೋಹನ್ ನಿಂಬಾಳ್ಕಾರ್, ದೀಪಾ, ನಿಶಾ, ಶ್ವೇತಾ, ನಾಗಭೂಷಣ, ವಿನೋದ್‌ಕುಮಾರ್, ಗಿರೀಶ್, ಶಶಿಕಿರಣ್, ಶಿಕ್ಷಕ ಜಿ.ಎಸ್. ಮಂಜು ವಿವಿಧ ಶಾಲಾ ಶಿಕ್ಷಕರು ಇದ್ದರು.