ಪಾಂಡವಪುರ ಪಟ್ಟಣದ ರೋಟರಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಸ್ನೇಹಸಮ್ಮಿಲ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಅಭಿನಂದಿಸಲಾಯಿತು. 
ಮಂಡ್ಯ

ಓದಿದ ಶಾಲೆ, ಗುರುಗಳನ್ನು ವಿದ್ಯಾರ್ಥಿಗಳು ಸ್ಮರಿಸಲಿ

ಪ್ರಮುಖ ಮುಖ್ಯಾಂಶಗಳು

  • ರೋಟರಿ ಶಾಲೆ ಮುಖ್ಯ ಶಿಕ್ಷಕ ನಾರಾಯಣಸ್ವಾಮಿ
  • ರೋಟರಿ ಶಾಲೆ
ಪಾಂಡವಪುರ: ಪ್ರತಿ ವಿದ್ಯಾರ್ಥಿ ಓದಿದ ಶಾಲೆ ಹಾಗೂ ವಿದ್ಯೆಕಲಿಸಿದ ಗುರುಗಳನ್ನು ಸ್ಮರಿಸುವ ಕೆಲಸ ಮಾಡಬೇಕು ಎಂದು ರೋಟರಿ ಶಾಲೆ ಮುಖ್ಯ ಶಿಕ್ಷಕ ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ರೋಟರಿ ಶಾಲೆಯಲ್ಲಿ ಆಯೋಜಿಸಿದ್ದ 2001-10ನೇ ಬ್ಯಾಚ್ ಹಿರಿಯ ವಿದ್ಯಾರ್ಥಿಗಳ ಸ್ನೇಹಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎಷ್ಟೇ ದೊಡ್ಡಮಟ್ಟದ ಸಾಧನೆ ಮಾಡಿದರೂ ಸಹ ಬಾಲ್ಯದಲ್ಲಿ ವಿದ್ಯೆ ಕಲಿಸಿದ ಗುರು ಮತ್ತು ಶಾಲೆಯನ್ನು ಮರೆಯಬಾರದು. ತಾವು ಓದಿದ ಶಾಲೆಯ ಅಭಿವೃದ್ಧಿಗೆ ಶ್ರಮಿಸುವ ಜತೆಗೆ ಶಾಲೆಯ ಬೆಳವಣಿಗೆಗೆ ಸಹಕಾರಿಯಾಗಿ ನಿಲ್ಲಬೇಕು ಎಂದರು.
ರೋಟರಿ ಶಾಲೆಯಲ್ಲಿ 2001 ರಿಂದ 2010ರವೆರೆಗೆ ವಿದ್ಯಾಭ್ಯಾಸ ಮಾಡಿದ ಹಿರಿಯ ವಿದ್ಯಾರ್ಥಿಗಳು ತಾವು ಓದಿದ ಶಾಲೆ ಮತ್ತು ಗುರುಗಳನ್ನು ಸ್ಮರಿಸಿ ಗುರುವಂದನಾ ಕಾರ್ಯಕ್ರಮದ ಮೂಲಕ ಗುರುಗಳಿಗೆ ಅಭಿನಂದನೆ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಪ್ರತಿ ಶಾಲೆಯಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.
ಸಮಾರಂಭದಲ್ಲಿ ಆಡಳಿತ ಮಂಡಳಿ ನಿರ್ದೇಶಕ ಅಶೋಕ್‌ಜೈನ್, ರಮೇಶ್, ದೈ.ಶಿ ಹೇಮಂತ್‌ಕುಮಾರ್, ಹಿರಿಯ ವಿದ್ಯಾರ್ಥಿ ಗಳಾದ ಪ್ರದೀಪ್‌ಕುಮಾರ್, ಮನೋಜ್, ರಜತ್, ವರುಣ್, ಶಶಿಕಾಂತ್, ರಕ್ಷಿತ್, ನಯನಾ, ಶೀಥಲ್, ಉದಯಚಂದ್ರಿಕ, ಲಾವಣ್ಯಾ, ಶರಣ್‌ಕುಮಾರ್, ದೃಪತುಂಗ, ನಿತೀಶ್, ಅಭಿಷೇಕ್, ಹರ್ಷಿತ್, ಕಾವ್ಯಾಇತರರು ಇದ್ದರು.