ಮದ್ದೂರು ತಾಲೂಕಿನ ಬೆಸಗರಹಳ್ಳಿಯ ಮಾನಸ ವಿದ್ಯಾಸಂಸ್ಥೆಯಲ್ಲಿ ನಡೆದ ಆರೋಗ್ಯ ಉಚಿತ ತಪಾಸಣಾ ಶಿಬಿರಕ್ಕೆ ಸಂಸ್ಥೆಯ ಅಧ್ಯಕ್ಷ ವಿ.ಕೆ.ಜಗದೀಶ್ ಚಾಲನೆ ನೀಡಿದರು. ಪ್ರೊ.ಬಿ.ಎಸ್.ಬೋರೇಗೌಡ, ರಾಮಕೃಷ್ಣೇಗೌಡ, ಎಂ.ಬಿ.ಯೋಗ, ಸಿದ್ದಯ್ಯ, ಶ್ರೀನಿವಾಸ್ ಇತರರು ಇದ್ದರು.
ಮಾನಸ ವಿದ್ಯಾಸಂಸ್ಥೆಯ ಅಧ್ಯಕ್ಷ ವಿ.ಕೆ.ಜಗದೀಶ್ ಸಲಹೆ
ಮದ್ದೂರು: ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಮಾನಸ ವಿದ್ಯಾಸಂಸ್ಥೆಯ ಅಧ್ಯಕ್ಷ ವಿ.ಕೆ.ಜಗದೀಶ್ ತಿಳಿಸಿದರು.
ತಾಲೂಕಿನ ಬೆಸಗರಹಳ್ಳಿಯ ಮಾನಸ ವಿದ್ಯಾ ಸಂಸ್ಥೆಯ ಆವರಣದಲ್ಲಿ ಭಾನುವಾರ ಮದ್ದೂರು ಕದಂಬ ಲಯನ್ಸ್ ಸಂಸ್ಥೆ, ಮಾನಸ ಎಜುಕೇಷನ್ ಟ್ರಸ್ಟ್, ಮದ್ದೂರು ಕ್ರೀಡಾ ಬಳಗದ, ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಒಕ್ಕಲಿಗರ ಸಂಘ, ದಂತ ವೈದ್ಯಕೀಯ ಮಹಾ ವಿದ್ಯಾಲಯ ಬೆಂಗಳೂರು ವತಿಯಿಂದ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ಜಂಜಾಟ ಹಾಗೂ ಒತ್ತಡದ ಜೀವನದಲ್ಲಿ ಬಹುತೇಕ ಜನರು ತಮ್ಮ ಆರೋಗ್ಯವನ್ನ ಲೆಕ್ಕಿಸದೆ ಕೆಲಸ ಮಾಡುತ್ತಿದ್ದು, ಇದರಿಂದ ಅತ್ಯಂತ ಚಿಕ್ಕಿ ವಯಸ್ಸಿನಲ್ಲೇ ಹಲವಾರು ರೋಗಗಳು ಬರುತ್ತಿರುವುದು ಆಂತಕ ಮೂಡಿಸಿದೆ. ಪ್ರತಿಯೊಬ್ಬರೂ ಯೋಗ, ವ್ಯಾಯಾಮ ಹಾಗೂ ಪ್ರಾಣಾಯಾಮಗಳನ್ನು ಮಾಡುವ ಮೂಲಕ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದರು.
ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡದ ಬೃಹತ್ ಆರೋಗ್ಯ ಉಚಿತ ತಪಾಸಣೆ, ದಂತ ತಪಾಸಣೆ ಶಿಬಿರದಲ್ಲಿ ನುರಿತ ವೈದ್ಯರು ಭಾಗವಹಿಸಿ ಚಿಕಿತ್ಸೆ ನೀಡಿದರು. ಬೆಸಗರಹಳ್ಳಿ ಸೇರಿದಂತೆ ಸುತ್ತಮತ್ತಲ ನೂರಾರು ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಂಡರು ಹಾಗೂ ರಕ್ತದಾನ ಶಿಬಿರದಲ್ಲಿ ಹಲವು ಮಂದಿ ರಕ್ತದಾನ ಮಾಡಿ ಗಮನ ಸೆಳೆದರು.
ಮದ್ದೂರು ಕ್ರೀಡಾ ಬಳಗದ ಕಾರ್ಯದರ್ಶಿ ಪ್ರೊ.ಬಿ.ಎಸ್.ಬೋರೇಗೌಡ, ಮದ್ದೂರು ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣೇಗೌಡ, ಕಾರ್ಯದರ್ಶಿ ಎಂ.ಬಿ.ಯೋಗ, ಖಜಾಂಚಿ ಸಿದ್ದಯ್ಯ, ಮದ್ದೂರು ಕದಂಬ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಶಿವಕುಮಾರ್, ಕಾರ್ಯದರ್ಶಿ ಎಸ್.ಬಿ.ನಾಗರಾಜು, ಖಜಾಂಚಿ ಟಿ.ಎನ್.ಶಿವಲಿಂಗೇಗೌಡ, ಮಾನಸ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಚ್.ಪಿ.ನಾಗರಾಜು, ಮುಖಂಡರಾದ ದಿನೇಶ್, ವಿ.ಕೆ.ಶ್ರೀನಿವಾಸ್, ಸನತ್. ಬಿ.ವಿ.ನಂಜಪ್ಪ, ಮಹೇಶ್, ರಮೇಶ್ ಸೇರಿದಂತೆ ಇತರರು ಇದ್ದರು.