ತಾಲೂಕಿನ ಬಲ್ಲೇನಹಳ್ಳಿ-ಸಬ್ಬನಕುಪ್ಪೆ ಮಾರ್ಗದಲ್ಲಿ ಕಂಡುಬಂದ ಚಿರತೆ ದೃಶ್ಯ. 
ಮಂಡ್ಯ

ಚಿರತೆ ಪ್ರತ್ಯಕ್ಷ, ಜನರಲ್ಲಿ ಆತಂಕ

ಲೋಕೇಶ್ ಮನು. ಡಿ
ಶ್ರೀರಂಗಪಟ್ಟಣ: ತಾಲೂಕಿನ ಬಲ್ಲೇನಹಳ್ಳಿ-ಸಬ್ಬನಕುಪ್ಪೆ ಗ್ರಾಮಗಳ ನಡುವಿನ ಮಾರ್ಗದಲ್ಲಿ ಗುರುವಾರ ಮಧ್ಯಾಹ್ನ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಅಣ್ಣೇಗೌಡ ಅವರ ಅಡಿಕೆ ತೋಟದಿಂದ ರಸ್ತೆ ದಾಟಿ ಜಮೀನೊಂದರಲ್ಲಿ ಬೇಟೆಗಾಗಿ ಕಾದು ಕುಳಿತಿರುವುದನ್ನು ದಾರಿಹೋಕರು ಕಂಡಿದ್ದು, ತಮ್ಮ ಮೊಬೈಲ್‌ಗಳಲ್ಲಿ ವಿಡಿಯೋ ಮೂಲಕ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ. ಜತೆಗೆ ಕೂಡಲಕುಪ್ಪೆ ಗ್ರಾಮದ ಮರಿಯಪ್ಪ ಅವರ ಜಮೀನಿನಲ್ಲಿ ತಾಯಿಯೊಂದಿಗೆ ಮರಿ ಚಿರತೆ ಸಹ ಜನರ ಕಣ್ಣಿಗೆ ಕಾಣಿಸಿಕೊಂಡಿದ್ದು, ರೈತರು, ಕೂಲಿ ಕಾರ್ಮಿಕರು ಜಮೀನು ಕಡೆ ತೆರಳಲು ಹೆದರುವಂತಾಗಿದೆ.
ಜನವಸತಿ ಸೇರಿದಂತೆ ಕೃಷಿ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆಗಳು ಜನ ಮತ್ತು ಜಾನುವಾರುಗಳ ಮೇಲೆ ದಾಳಿ ಮಾಡಿ ಆನಾಹುತ ಸೃಷ್ಟಿಸುವ ಮುನ್ನೀ ತಾಲೂಕು ಆಡಳಿತ ಕ್ರಮ ವಹಿಸಬೇಕು ಹಾಗೂ ಅರಣ್ಯ ಇಲಾಖೆ ಬೋನು ಇರಿಸಿ ಚಿರತೆಗಳನ್ನು ಸರೆ ಹಿಡಿದು ಸ್ಥಳಾಂತರಗೊಳಿಸಬೇಕು ಎಂದು ಬಲ್ಲೇನಹಳ್ಳಿ, ಸಬ್ಬನಕುಪ್ಪೆ, ಚಿಂದಗಿರಿಕೊಪ್ಪಲು ಹಾಗೂ ಕೂಡಲಕುಪ್ಪೆ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.