ಮಾಜಿ ಸಚಿವ ಡಿ.ಸಿ.ತಮ್ಮಣ್ಣ  
ಮಂಡ್ಯ

ಮಹನೀಯರ ತತ್ವಾದರ್ಶ ಮೈಗೂಡಿಸಿಕೊಳ್ಳಿ

ಲಲಾಟಾಕ್ಷ ಎಸ್
ಮದ್ದೂರು: ಮಹನೀಯರ ಜನ್ಮ ದಿನ ಆಚರಿಸುವ ಜತೆಗೆ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
ನಗರದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರ ನಿವಾಸದಲ್ಲಿ ಭಾನುವಾರ ನೇಗಿಲಯೋಗಿ ಕೆಂಬುತಯ್ಯ ಚಿಕ್ಕಣ್ಣ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜಯಂತಿ, ಭೀಮಾ ಕೋರೆಗಾಂವ್ ವಿಜಯೋತ್ಸವ ಹಾಗೂ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾನ್ ವ್ಯಕ್ತಿಗಳು ನಮ್ಮ ದೇಶಕ್ಕೆ ಹಾಗೂ ದೇಶದ ಜನರಿಗಾಗಿ ಪ್ರಾಣದ ಹಂಗು ತೊರೆದು ಹೋರಾಟ ಮಾಡಿ ವೀರ ಮರಣ ಹೊಂದಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಓದಿ ತಿಳಿದುಕೊಳ್ಳಬೇಕೆಂದರು.
ಪ್ರಸ್ತುತ ದಿನಗಳಲ್ಲಿ ಮಕ್ಕಳು ತಂದೆ ತಾಯಿಯನ್ನು ನೋಡಿಕೊಳ್ಳದ ಸಂದರ್ಭದಲ್ಲಿ ಇವರು ತಮ್ಮ ತಾತ ಹಾಗೂ ತಂದೆ ಹೆಸರಿನ ಟ್ರಸ್ಟ್ ಮೂಲಕ ಸಮಾಜ ಸೇವೆ ಮಾಡಲು ಮುಂದಾಗಿರುವುದು ಹೆಮ್ಮೆಯ ವಿಷಯದ ಎಂದು ಹರ್ಷ ವ್ಯಕ್ತಪಡಿಸಿದರು. ಟ್ರಸ್ಟ್ ಮುಂದಿನ ದಿನಗಳಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಉನ್ನತ ಮಟ್ಟಕ್ಕೆ ಬೆಳೆಯಲಿ. ಟ್ರಸ್ಟ್‌ಗೆ ವೈಯಕ್ತಿಕವಾಗಿ ಸಹಾಯ ಮಾಡುತ್ತೇನೆ ಎಂದರು.
ನೇಗಿಲಯೋಗಿ ಕೆಂಬುತಯ್ಯ ಚಿಕ್ಕಣ್ಣ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಿ.ಸಿ.ಮಹೇಂದ್ರ, ಪ್ರಧಾನ ಕಾರ್ಯದರ್ಶಿಎಚ್.ಎಂ.ಶ್ವೇತಾ, ತಾಲೂಕು ಜೆಡಿಎಸ್ ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ಕಾರ್ಯಾಧ್ಯಕ್ಷ ಕೆ.ರಾಜಣ್ಣ, ರಾಜ್ಯ ವಕ್ತಾರ ವೇಣು ಗೋಪಾಲ್, ಪರಿಶಿಷ್ಟ ಜಾತಿ ಪಂಗಡಗಳ ಜಿಲ್ಲಾಧ್ಯಕ್ಷ ಜಯರಾಂ, ತಾಲೂಕು ಅಧ್ಯಕ್ಷ ಕಾಳಯ್ಯ, ಕಾಳಿಕಾಂಬ ವಿದ್ಯಾಸಂಸ್ಥೆಯ ನಿರ್ದೇಶಕರಾದ ಚಿಕ್ಕ ಹುಚ್ಚಯ್ಯ, ಮಹೇಶ್, ಪ್ರದೀಪ್, ತಾಲೂಕು ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಮಂಡ್ಯ ಸಿಟಿ ಕ್ಲಬ್ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿಗೌಡ, ನಗರಸಭಾ ಮಾಜಿ ಸದಸ್ಯೆ ಪ್ರಿಯಾಂಕಾ, ಮುಖಂಡರಾದ ಮಹೇಶ್, ಲಕ್ಷ್ಮೀನಾರಾಯಣ, ರವಿ, ಚಂದ್ರಹಾಸ, ಜ್ಯೋತಿ, ಕೆ.ಟಿ.ಸುರೇಶ್, ಗುಡಿಗೆರೆ ಬಸವರಾಜು, ಚಾಮನಹಳ್ಳಿ ರಾಖಿ, ಮಲ್ಲರಾಜ್, ಚಿಕ್ಕಣ್ಣ, ವೀರೇಶ್ ಇದ್ದರು.