ಕಿಕ್ಕೇರಿಯಲ್ಲಿ ನೇಕಾರ ಕುರುಹಿನಶೆಟ್ಟಿ ಯುವ ಬಳಗದಿಂದ ಗುರುವಾರ ಅನ್ನಸಂತರ್ಪಣೆ ನೆರವೇರಿತು. ಕೆ.ವಿ.ಅರುಣಕುಮಾರ್, ಶ್ರೀನಿವಾಸ, ರಘು, ರಮೇಶ್, ರಾಜೇಶ್, ಗೋವಿಂದರಾಜು ಮತ್ತಿತರರಿದ್ದರು.  
ಮಂಡ್ಯ

ಕುರುಹಿನಶೆಟ್ಟಿ ಸಮಾಜದ ಸಂಘಟನೆ ಅವಶ್ಯ

ಪ್ರಮುಖ ಮುಖ್ಯಾಂಶಗಳು

  • ನೇಕಾರ ಕುರುಹಿನಶೆಟ್ಟಿ ಯುವಬಳಗದ ಮಾರ್ಗದರ್ಶಿ ಕೆ.ವಿ.ಅರುಣಕುಮಾರ್
  • ರಂಗಮ್ಮ ಛೇ. ತಮ್ಮಯ್ಯ ಸಮುದಾಯ ಭವನ
ಕಿಕ್ಕೇರಿ: ಸಮಾಜದಲ್ಲಿ ಕೆಳಸ್ತರದ ಸಮುದಾಯಗಳಲ್ಲಿ ಕುರುಹಿನಶೆಟ್ಟಿ ಜನಾಂಗವೂ ಒಂದಾಗಿದ್ದು, ಸಂಘಟನೆಯ ಅವಶ್ಯವಿದೆ ಎಂದು ನೇಕಾರ ಕುರುಹಿನಶೆಟ್ಟಿ ಯುವಬಳಗದ ಮಾರ್ಗದರ್ಶಿ ಕೆ.ವಿ.ಅರುಣಕುಮಾರ್ ತಿಳಿಸಿದರು.
ಲಕ್ಷ್ಮೀದೇವಿ ಅಮ್ಮನವರ ಜಾತ್ರಾ ಮಹೋತ್ಸವ ಅಂಗವಾಗಿ ಗುರುಸಿದ್ಧಾರೂಢಸ್ವಾಮಿ ಹೆಸರಿನಲ್ಲಿ ರಂಗಮ್ಮ ಛೇ. ತಮ್ಮಯ್ಯ ಸಮುದಾಯ ಭವನದಲ್ಲಿ ಗುರುವಾರ ಇಲ್ಲಿನ ನೇಕಾರ ಕುರುಹಿನಶೆಟ್ಟಿ ಯುವ ಬಳಗದಿಂದ ಆಯೋಜಿಸಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಇಂತಹ ಕಾರ್ಯಕ್ರಮಗಳು ಎಲ್ಲರಲ್ಲಿ ಸಾಮರಸ್ಯ, ಸಹಬಾಳ್ವೆ ಮೂಡಿಸಲಿವೆ. ಜಾತ್ರೆ ಸಂಭ್ರಮ ಎಲ್ಲರಲ್ಲಿ ಸಂಭ್ರಮ, ಸಂತಸ ಮೂಡಿಸಲಿದೆ ಎಂದರು.
ನೇಕಾರರ ಕಸುಬಿಗೆ ಬೆಲೆ, ಕೆಲಸವೂ ಇಲ್ಲವಾಗಿದೆ. ಅಲ್ಲದೆ ಕಚ್ಚಾ ಪದಾರ್ಥಗಳನ್ನು ಸರ್ಕಾರ ಸರಬರಾಜು ಮಾಡುತ್ತಿಲ್ಲ. ಹೀಗಾಗಿ ನೇಕಾರರು ನಗರ ಪ್ರದೇಶಗಳಿಗೆ ಗುಳೇ ಹೋಗುವಂತಾಗಿದೆ. ಜಾತ್ರೆ ನೆನಪಿನಲ್ಲಿ ವರ್ಷಕ್ಕೊಮ್ಮೆ ಸೇರುವುದರಿಂದ ಪರಸ್ಪರ ಎಲ್ಲರೂ ಚರ್ಚಿಸಬಹುದಾಗಿದೆ ಎಂದರು.
ಯುವ ಬಳಗದ ಸದಸ್ಯರಾದ ಕೆ.ಎನ್.ಶ್ರೀನಿವಾಸ್, ಕೆ.ಎನ್.ರಘು, ಕೆ.ಆರ್.ರಮೇಶ್, ಜಿ.ಕೆ.ಸ್ವಾಮಿ, ಗೋವಿಂದರಾಜು, ಕೆ.ಆರ್. ರಾಜೇಶ್, ಕೆ.ಎಸ್.ಕಿರಣ್, ಎಚ್.ಕೆ.ಮಂಜುನಾಥ್, ಕೃಷ್ಣ, ಸ್ವಾಮಿ, ಸುರೇಶ್, ಜಿ.ಕೆ.ಮೂರ್ತಿ, ಕೆ.ಆರ್.ನಟರಾಜು, ವೆಂಕಟೇಶ್, ಡಿ. ವಾಸು, ಸುರೇಶ್, ಪ್ರಕಾಶ್, ಎಚ್.ಆರ್. ಲೋಕೇಶ್, ಸೀತಾರಾಮ ಮತ್ತಿತರರಿದ್ದರು.
26ಕೆಕೆಆರ್2