ಕೆ.ಶೆಟ್ಟಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಮರಿಸ್ವಾಮಿಗೌಡ ಅವಿರೋಧ ಆಯ್ಕೆಯಾದರು. ಹನುಮಂತೇಗೌಡ, ಸುರೇಂದ್ರ, ಟಿ.ಪದ್ಮಮ್ಮ, ನಾಗೇಶ್, ಶಿವಲಿಂಗ, ಪುಟ್ಟಸ್ವಾಮಿ, ಶೆಟ್ಟಹಳ್ಳಿ ರಘು ಇದ್ದರು.
ಕೆ.ಎಂ.ದೊಡ್ಡಿ: ಸಮೀಪದ ಕೆ.ಶೆಟ್ಟಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಮರಿಸ್ವಾಮಿಗೌಡ ಅವಿರೋಧ ಆಯ್ಕೆಯಾದರು.
ಸಿ.ಚನ್ನೇಗೌಡ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇತ್ತೀಚೆಗೆ ಚುನಾವಣೆ ನಿಗದಿಯಾಗಿತ್ತು. ಎಸ್.ಮರಿಸ್ವಾಮಿಗೌಡ ಹೊರತುಪಡಿಸಿ ಬೇರ‌್ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಸೂದನ್ ಅವಿರೋಧ ಆಯ್ಕೆ ಘೋಷಿಸಿದರು.
ಬಳಿಕ ಮಾತನಾಡಿದ ಅಧ್ಯಕ್ಷ ಎಸ್.ಮರಿಸ್ವಾಮಿಗೌಡ, ಸಂಘದಲ್ಲಿ ಷೇರು ಹೆಚ್ಚಿಸುವ ಜತೆಗೆ ರೈತರಿಗೆ ಸೂಕ್ತ ಸಮಯದಲ್ಲಿ ಅಗತ್ಯ ರಸಗೊಬ್ಬರ ಪೂರೈಕೆ, ಸರ್ಕಾರದಿಂದ ಸವಲತ್ತುಗಳನ್ನು ಸಮರ್ಪಕವಾಗಿ ಸಿಗುವಂತೆ ಶ್ರಮಿಸುತ್ತೇನೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಕರಡಕೆರೆ ಹನುಮಂತೇಗೌಡ, ಸದಸ್ಯ ಸುರೇಂದ್ರ, ಸಂಘದ ಉಪಾಧ್ಯಕ್ಷೆ ಟಿ.ಪದ್ಮಮ್ಮ, ಮುಖಂಡರಾದ ನಾಗೇಶ್, ಶಿವಲಿಂಗ, ಪುಟ್ಟಸ್ವಾಮಿ, ಶೆಟ್ಟಹಳ್ಳಿ ರಘು, ಸಿದ್ದರಾಜು, ಎಸ್.ಬಿ.ಮನು, ಗಿರೀಶ್, ಕರಡಕೆರೆ ಮನು, ನಿರ್ದೇಶಕರಾದ ಸಿ.ಚನ್ನೇಗೌಡ, ಎಸ್.ಶೇಖರ್, ಬೋಮ್ಮೇಗೌಡ, ಎ.ಎಚ್.ಶಿವಲಿಂಗೇಗೌಡ, ಎಸ್.ಬಿ ನಂಜುಡೇಗೌಡ, ಬಿ.ಅಂದಾನಿಗೌಡ, ಎಸ್.ಎಚ್. ತಿಮ್ಮರಾಜು, ಕೆ.ಎಚ್.ಇಂದಿರಾ, ಕೆಂಪಮ್ಮ, ಟಿ.ಎಸ್.ಚರಣ್ ಕುಮಾರ್ ಉಪಸ್ಥಿತರಿದ್ದರು.