ಕೆ.ಆರ್.ಸಾಗರ ಬೃಂದಾವನದ ತೆರಳುವ ಪಾಂಡವಪುರ ರಸ್ತೆಯ ಕೆಳಸೇತುವೆ ಬಳಿಯ ಟೋಲ್
* ಕೆ.ಆರ್.ಸಾಗರ : ಬೃಂದಾವನ-ಪಾಂಡವಪುರ ರಸ್ತೆಯಲ್ಲಿರುವ ಕೆಳ ಸೇತುವೆ ಬಳಕೆಗೆ ಇರುವ ಟೋಲ್ ಅನ್ನು ಸ್ಥಳಾಂತರ ಮಾಡುವಂತೆ ಸೋಮವಾರ ವಿಧಾನಸಭೆ ಕಲಾಪದಲ್ಲಿ ಶಾಸಕ ದರ್ಶನ ಪುಟ್ಟಣಯ್ಯ ಮನವಿ ಮಾಡಿದರು.
ಸುಮಾರು ವರ್ಷಗಳಿಂದ ಈ ಟೋಲ್ ಅನ್ನು ಕಾವೇರಿ ನೀರಾವರಿ ನಿಗಮದ ವತಿಯಿಂದ ನಿರ್ಮಿಸಿದ್ದು, 2024-25ರ ಅವಧಿಯಲ್ಲಿ ಕೆಳಸೇತುವೆಗೆ ವೆಚ್ಚವಾಗಿರುವುದಕ್ಕಿಂತ ಹೆಚ್ಚು ವಸೂಲಿ ಮಾಡಲಾಗಿದೆ. ಆದರೂ ಟೋಲ್ ಇರುವುದರಿಂದ ಸ್ಥಳೀಯ ಗ್ರಾಮಸ್ಥರು, ರೈತರಿಗೆ ನಿತ್ಯ ತೊಂದರೆಯಾಗುತ್ತಿದೆ. ಈ ಕೂಡಲೇ ಟೋಲ್ ಅನ್ನು ಬೃಂದಾವನದ ಮಾರ್ಗಕ್ಕೆ ಸ್ಥಳಾಂತರ ಮಾಡಬೇಕು ಎಂದು ಮನವಿ ಮಾಡಿದರು.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಟೋಲ್ ಸ್ಥಳಾಂತರ ಬಗ್ಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಬೃಂದಾವನದ ಕಡೆ ಬಂದಾಗ ಟೋಲ್ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.