ಪಟ್ಟಣದ ತಾಲೂಕು ಕಛೇರಿಯ ಸಭಾಂಗಣದಲ್ಲಿ ಆಹಾರ ಇಲಾಖೆಯ ಜಿಲ್ಲಾ ನಿರ್ದೇಶಕ ಪ್ರತೀಕ್ ಹೆಗ್ಗಡೆ ಅವರ ಮುಂದೆ ಕಳಪೆ ರಾಗಿಯನ್ನು ಪ್ರದರ್ಶಿಸಿದ ರೈತರು ಗುಣಮಟ್ಟ ಪರಿಶೀಲನೆ ಮಾಡದೆ ನ್ಯಾಯಬೆಲೆ ಅಂಗಡಿಗಳ ಮೂಲಕ ಕಲ್ಲು ಮಣ್ಣುಗಳಿಂದ ಕಲುಷಿತಗೊಂಡಿರುವ ಕಳಪೆ ರಾಗಿ ಪೂರೈಸಿದರವರ ವಿರುದ್ದ ಕ್ರಮಕ್ಕೆ ಒತ್ತಾಯಿಸಿದರು. 
ಮಂಡ್ಯ

ಕಳಪೆ ರಾಗಿ ಪ್ರದರ್ಶಿಸಿದ ರೈತರು

ಎ. ಆರ್. ರಘುರಾಮ
ಕೆ.ಆರ್.ಪೇಟೆ: ಕಳಪೆ ರಾಗಿ ಪೂರೈಕೆ ಮಾಡಿ ತಾಲೂಕಿನ ಬಡವರಿಗೆ ಕಲ್ಲುಮಣ್ಣು ತಿನಿಸಿದ ಬ್ರಷ್ಟ ಅಧಿಕಾರಿಗಳು ಮತ್ತು ಏಜೆನ್ಸಿ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ತಾಲೂಕು ರೈತಸಂಘದ ಮುಖಂಡರು ಆಗ್ರಹಿಸಿದರು.
ಪಟ್ಟಣದ ತಾಲೂಕು ಕಛೇರಿಯ ಸಭಾಂಗಣದಲ್ಲಿ ಆಹಾರ ಇಲಾಖೆಯ ಜಿಲ್ಲಾ ನಿರ್ದೇಶಕ ಪ್ರತೀಕ್ ಹೆಗ್ಗಡೆ ಅವರ ಮುಂದೆ ಕಳಪೆ ರಾಗಿಯನ್ನು ಪ್ರದರ್ಶಿಸಿದ ರೈತರು ಗುಣಮಟ್ಟ ಪರಿಶೀಲನೆ ಮಾಡದೆ ನ್ಯಾಯಬೆಲೆ ಅಂಗಡಿಗಳ ಮೂಲಕ ಕಲ್ಲು ಮಣ್ಣುಗಳಿಂದ ಕಲುಷಿತಗೊಂಡಿರುವ ಕಳಪೆ ರಾಗಿ ಪೂರೈಸಿದರವರ ವಿರುದ್ದ ಕ್ರಮಕ್ಕೆ ಒತ್ತಾಯಿಸಿದರು.
ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಮಾತನಾಡಿ ತಾಲೂಕಿನಲ್ಲಿ ಗ್ರಾಹಕರಿಗೆ ಕಳಪೆ ಗುಣಮಟ್ಟದ ಪಡಿತರ ರಾಗಿ ವಿತರಣೆಯ ಬಗ್ಗೆ ರೈತಸಂಘ ಪ್ರತಿಭಟನೆ ಮಾಡಿ ಅದು ಪತ್ರಿಕೆಗಳಲ್ಲೂ ವರದಿಯಾಗಿತ್ತು. ಪತ್ರಿಕೆಗಳಲ್ಲಿ ವರದಿ ಬಂದ ಮೇಲಾದರೂ ಆಹಾರ ಇಲಾಖೆಯ ಮೇಲಧಿಕಾರಿಗಳು ತಾಲೂಕಿಗೆ ಆಗಮಿಸಿ ರಾಗಿಯ ಗುಣಮಟ್ಟ ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಲು ಮುಂದಾಬೇಕಾಗಿತ್ತು. ವಿದ್ಯಾವಂತರು ತಮ್ಮ ಬುದ್ದಿ ಸಾಮರ್ಥ್ಯದಿಂದ ಸರ್ಕಾರಿ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಬುದ್ದಿಶಕ್ತಿಯನ್ನು ಬಳಸಿ ಸಮಾಜದ ಕಾವಲುಗಾರರಾಗಿ ಕೆಲಸ ಮಾಡಿ. ಸಮಾಜವನ್ನು ಕಾಯುವುದಕ್ಕಾಗಿಯೇ ಸರ್ಕಾರ ನಿಮಗೆ ಲಕ್ಷಗಟ್ಟಲೆ ವೇತನ ನೀಡುತ್ತಿದೆ. ಅಧಿಕಾರಿಗಳು ಕಂಡು ಹಿಡಿಯಬೇಕಾದ ಲೋಪದೋಷಗಳನ್ನು ರೈತಸಂಘ ಕಂಡು ಹಿಡಿದು ಪ್ರತಿಭಟಿಸಬೇಕಾದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿಒನಿಧಿಗಳು ಮೋಸಗಾರರ ಪರ ನಿಂತು ಬಡವರಿಗೆ ಮಣ್ಣು ತಿನ್ನಿಸುವ ಕೆಲಸ ಮಾಡಬೇಡಿ. ರೈತರಿಗೆ ಕಲ್ಲು ಮಣ್ಣು ತಿನ್ನುವ ಭಾಗ್ಯವನ್ನು ನೀಡಬೇಡಿ. ಕಳಪೆ ಪಡಿತರ ಧಾನ್ಯಗಳನ್ನು ತಿರಸ್ಕರಿಸಿ ಎಂದು ನೀವು ಜನರಿಗೆ ಹೇಳುತ್ತೀರಿ. ಸರ್ಕಾರ ನೀಡುವ ಮರ‍್ನಾಲ್ಕು ಕೆ.ಜಿ ಪಡಿತರವನ್ನು ತಿರಸ್ಕರಿಸಿ ಬಡಜನರು ತಮ್ಮ ಸ್ವಂತ ಹಣ ಮತ್ತು ಸಮಯವನ್ನು ವೆಚ್ಚಮಾಡಿಕೊಂಡು ನೀವು ಇರುವ ಜಾಗವನ್ನು ಹುಡುಕಿಕೊಂಡು ಬಂದು ದೂರು ನೀಡಬೇಕಾ? ಜನರು ದೂರು ಕೊಟ್ಟಾಗ ಮಾತ್ರ ಪರಿಸೀಲಿಸುವುದಾರೆ ನಿಮ್ಮ ಜವಾಬ್ದಾರಿ ಏನು? ಏಜೆನ್ಸಿ ನೀಡಿದನ್ನು ಪರಿಶೀಲಿಸದೆ ಗ್ರಾಹಕರಿಗೆ ವಿತರಿಸುವುದಾದರೆ ನಿಮ್ಮ ಇಲಾಖೆಯ ಅಗತ್ಯವೇನು? ಎಂದು ಆಹಾರ ಇಲಾಖೆಯ ಜಿಲ್ಲಾ ನಿರ್ದೇಶಕ ಪ್ರತೀಕ್ ಹೆಗ್ಗಡೆ ಅವರನ್ನು ತರಾಟೆಗೆ ತೆಗೆದುಕೊಂಡರು.
ಆಹಾರ ಇಲಾಖೆಯ ಜಿಲ್ಲಾ ನಿರ್ದೇಶಕ ಪ್ರತೀಕ್ ಹೆಗ್ಗಡೆ ಮಾತನಾಡಿ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆಯಾಗುವ ಪಡಿತರ ಆಹಾರ ಧಾನ್ಯಗಳ ಗುಣಮಟ್ಟವನ್ನು ಆಹಾರ ನಿಯಂತ್ರಣ ಇಲಾಖೆ (ಎಫ್.ಸಿ.ಎ) ಪರಿಶೀಲಿಸದ ಅನಂತರವೇ ಅದು ನಮ್ಮ ಇಲಾಖೆಯ ಮದ್ಯಂತರ ಗೋದಾಮಿಗೆ ಬರುತ್ತದೆ. ಅಲ್ಲಿಂದ ಅದನ್ನು ನಮ್ಮ ಇಲಾಖೆ ಸಾರ್ವಜನಿಕ ವಿತರಣೆಗೆ ನೀಡುತ್ತದೆ. ಪ್ರಸ್ತುತ ಕೆ.ಆರ್.ಪೆಟೆ ತಾಲೂಕಿಗೆ ಪೂರೈಕೆಯಾಗಿರುವ ರಾಗಿ ಹಾಸನ ಜಿಲ್ಲೆಯ ಜಾವಗಲ್ ಗೋದಾಮಿನಿಂದ ಪೂರೈಕೆಯಾಗಿದೆ. ನನಗೆ ಹತ್ತು ದಿನಗಳ ಕಾಲಾವಕಾಶ ನೀಡಿ. ಹಾಸನ ಜಿಲ್ಲೆಯ ಆಹಾರ ಇಲಾಖೆಯ ನಿರ್ದೇಶಕರನ್ನು ನನ್ನ ಜೊತೆ ಕೆ.ಆರ್.ಪೇಟೆ ಪಟ್ಟಣಕ್ಕೆ ಕರೆತಂದು ನಿಮ್ಮ ಮುಂದೆ ಮತ್ತೆ ಚರ್ಚಿಸುತ್ತೇನೆ. ತಪ್ಪತಸ್ಥರಿಗೆ ಶಿಕ್ಷೆಯಾಗಬೇಕೆನ್ನುವ ರೈತಸಂಘದ ವಾದಕ್ಕೆ ನನ್ನ ವಿರೋಧವಿಲ್ಲ. ಕಳೆಪ ರಾಗಿ ಪೂರೈಕೆಯಾಗಿರುವ ಬಗ್ಗೆ ನಾನು ಇಲಾಖೆಯ ಮೇಲಧಿಕಾರಿಗಳ ಗಮನಕ್ಕೂ ತಂದು ಸೂಕ್ತ ತನಿಖೆಗೆ ಅಗತ್ಯ ವರದಿ ನೀಡುತ್ತೇನೆ. ಪ್ರತಿ ನ್ಯಾಯಬೆಲೆ ಅಂಗಡಿಗಳ ಮುಂದೆ ನಮ್ಮ ಇಲಾಖೆಯ ಸಹಾಯವಾಣಿ ನಂ.೧೯೬೭ ನ್ನು ಬಹಿರಂಗವಾಗಿ ಪ್ರದರ್ಶಿಸಬೇಕು. ಈಬಗ್ಗೆ ಎಲ್ಲಾ ನ್ಯಾಬೆಲೆ ಅಂಗಡಿ ಮಾಲೀಕರಿಗೂ ಸೂಚಿಸುತ್ತೇನೆ. ಗ್ರಾಹಕರು ಕಳಪೆ ಪಡಿತರ ಪೂರೈಕೆಯಾದರೆ ಅದನ್ನು ನಿರಾಕರಿಸಿ ನಮ್ಮ ಇಲಾಖೆಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಿದರೆ ತಕ್ಷಣವೇ ಕ್ರಮ ವಹಿಸುತ್ತೇನೆಂದು ಭರವಸೆ ನೀಡಿದರು.
ಕೊಟ್ಟ ಮಾತಿನಂತೆ ಮುಂದಿನ ೧೦ ದಿನಗಳ ಒಳಗಾಗಿ ಕಳಪೆ ರಾಗಿ ಪೂರೈಕೆ ಸಂಬAಧ ಅಗತ್ಯ ಕ್ರಮವಾಗಬೇಕು. ಇಲಾಖೆಯ ಅಧಿಕಾರಿಗಳು ತೆಗೆದುಕೊಳ್ಳುವ ಕ್ರಮ ಇತರ ಜಿಲ್ಲೆಗಳಿಗೂ ಮಾದರಿಯಾಗಬೇಕು. ಇಲ್ಲದಿದ್ದರೆ ರಾಜ್ಯ ರೈತಸಂಘ ಉಗ್ರ ಹೋರಟ ನಡೆಸಬೇಕಾಗುತ್ತದೆಂದು ಸಭೆಯಲ್ಲಿದ್ದ ರೈತ ಮುಖಂಡರು ಎಚ್ಚರಿಸಿದರು.
ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಮುಖಂಡರಾದ ಎಲ್.ಬಿ.ಜಗದೀಶ್, ಹೊನ್ನೇಗೌಡ, ನಗರೂರು ಕುಮಾರ್, ಚೌಡೇನಹಳ್ಳಿ ಕೃಷ್ಣೇಗೌಡ, ಹಿರೀಕಳಲೆ ಬಸವರಾಜು, ಲಕ್ಷಿö್ಮÃಪುರ ನಾಗರಾಜು, ಮುದ್ದುಕುಮಾರ್ ಸೇರಿದಂತೆ ಹಲವರಿದ್ದು ಮಾತನಾಡಿದರು.
ಆಹಾರ ಇಲಾಖೆಯ ಪರಿವೀಕ್ಷಕ ಬಸವರಾಜು, ಆಹಾರ ನಿರೀಕ್ಷಕ ನಟರಾಜು ಸೇರಿದಂತೆ ತಾಲೂಕಿನ ವಿವಿಧ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಸಭೆಯಲ್ಲಿದ್ದರು.