ಮತದಾರರಾಗಲಿ ಹೆಸರು ನೋಂದಾಯಿಸಿಕೊಳ್ಳಲು ಯುವ ಜನತೆಗೆ ಅರಿವು ಮೂಡಿಸಲು ವಿಶ್ವ ವಿಖ್ಯಾತ ಕೃಷ್ಣರಾಜಸಾಗರದ ಬೃಂದಾವನದ ಪ್ರವೇಶ ದ್ವಾರದಲ್ಲಿ ರಂಗೋಲಿ ಬಿಡಿಸಿ ಬಿಡಿಸಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಶ್ರೀರಂಗಪಟ್ಟಣ ತಾಪಂ ಆಡಳಿತಾಧಿಕಾರಿ ಲಕ್ಷ್ಮೀ ಚಾಲನೆ ನೀಡಿದರು. ಚಂದ್ರು, ತ್ರೀವೇಣಿ, ಶ್ರೀನಿವಾಸ್, ಕುಳ್ಳೇಗೌಡ ಮತ್ತಿತರರಿದ್ದರು. 
ಮಂಡ್ಯ

ಮತದಾನದ ಅರಿವಿಗೆ ರಂಗೋಲಿ ಚಿತ್ತಾರ

ರಾಜಣ್ಣ
ಕೆ.ಆರ್.ಸಾಗರ: ಬಣ್ಣ ಬಣ್ಣದ ರಂಗೋಲಿ ಬಿಡಿಸುವ ಮೂಲಕ ಮತದಾರರಾಗಿ ಹೆಸರು ನೋಂದಾಯಿಸಿಕೊಂಡು ಮತದಾನದಲ್ಲಿ ಪಾಲ್ಗೊಳ್ಳುವಂತೆ ಯುವ ಮತದಾರರಲ್ಲಿ ಅರಿವು ಮೂಡಿಸಲಾಯಿತು.
ವಿಶ್ವ ವಿಖ್ಯಾತ ಕೃಷ್ಣರಾಜಸಾಗರದ ಬೃಂದಾವನದ ಪ್ರವೇಶ ದ್ವಾರದಲ್ಲಿ ಯುವ ಪ್ರವಾಸಿಗರಿಗೆ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಸ್ವೀಪ್, ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ರಂಗೋಲಿ ಕಾರ್ಯಕ್ರಮದಲ್ಲಿ ಕೆ.ಆರ್.ಸಾಗರ, ಹುಲಿಕೆರೆ ಮತ್ತು ಬೆಳಗೊಳ ಗ್ರಾಪಂ ವ್ಯಾಪ್ತಿಯ ಸಂಜೀವಿನಿ ಒಕ್ಕೂಟ ಸಿಬ್ಬಂದಿ ಪಾಲ್ಗೊಂಡು ಸುಂದರ ವಾದ ರಂಗೋಲಿ ಚಿತ್ತಾರ ಬಿಡಿಸಿದ್ದು ನೋಡುಗರ ಗಮನ ಸೆಳೆಯಿತು.
ಮಂಡ್ಯ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ-2 ಹಾಗೂ ಶ್ರೀರಂಗಪಟ್ಟಣ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಲಕ್ಷ್ಮೀ ಚಾಲನೆ ನೀಡಿ ಮಾತನಾಡಿ, 18 ವರ್ಷ ತುಂಬಿದ ಯುವಕ-ಯುವತಿಯರು ತಪ್ಪದೆ ಮತದಾರರಾಗಿ ಹೆಸರು ನೋಂದಾಯಿಸಿಕೊಳ್ಳುವಂತೆ ಸಲಹೆ ನೀಡಿದರು.
ತಾಲೂಕು ಕಾರ್ಯನಿರ್ವಹಣಾಧಿಕಾರಿ ಚಂದ್ರು, ತಾಲೂಕು ಯೋಜನಾ ಅಧಿಕಾರಿ ತ್ರಿವೇಣಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸ್, ಕುಳ್ಳೇಗೌಡ, ಶಶಿಕಲಾ, ಕೆ.ಆರ್.ಸಾಗರ ಗ್ರಾಪಂ ಲೆಕ್ಕ ಸಹಾಯಕ ರವಿ, ಎನ್‌ಆರ್‌ಎಲ್‌ಎಂ ಸಿಬ್ಬಂದಿ ಶೇಖರ್, ಮಹದೇವ್, ಕೆ.ಆರ್.ಸಾಗರ, ಹುಲಿಕೆರೆ ಮತ್ತು ಬೆಳಗೊಳ ಗ್ರಾಪಂ ವ್ಯಾಪ್ತಿಯ ಸಂಜೀವಿನಿ ಒಕ್ಕೂಟ ಸಿಬ್ಬಂದಿ ಇದ್ದರು.